ಆಫ್ರಿಕನ್ ಹಂದಿ ಜ್ವರ: ಫಾರಂ ಕಿಮೀ ವ್ಯಾಪ್ತಿಯ ಎಲ್ಲಾ ಹಂದಿಗಳಿಗೆ ‘ಮರಣ ದಂಡನೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡಿನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಯಾದ ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ.
ಮಾನಂತವಾಡಿಯ ಎರಡು ವಾರ್ಡ್‌ಗಳಲ್ಲಿ ಹಂದಿಜ್ವರ ಇರುವುದು ಭೋಪಾಲ್‌ಗೆ ಕಳುಹಿಸಲಾದ ಪರೀಕ್ಷೆಯ ಮಾದರಿಯಲ್ಲಿ ರೋಗ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ 10 ಕಿ.ಮೀ. ವ್ಯಾಪ್ತಿಯನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಇದೇ ಸಂದರ್ಭ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಕೂಡಾ ನಿಗಾ ಹೆಚ್ಚಿಸಲಾಗಿದ್ದು, ತೋಗ ವ್ಯಾಪಿಸದಂತರ ವ್ಯಾಪಕ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!