ಆಫ್ರಿಕನ್ ಹಂದಿ ಜ್ವರ ಭೀತಿ, ಮಧ್ಯಪ್ರದೇಶದಲ್ಲಿ 85 ಹಂದಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ 85 ಹಂದಿಗಳು ಆಫ್ರಿಕನ್ ಹಂದಿ ಜ್ವರದಿಂದ ಮೃತಪಟ್ಟಿವೆ.
115 ಹಂದಿಗಳಿಗೆ ಸೋಂಕು ತಗುಲಿದ್ದು, ಈ ಪ್ರದೇಶದಲ್ಲಿ ಸಮೀಕ್ಷೆ ನಡೆಯುತ್ತಿದೆ. ಸೋಂಕಿತ ಹಂದಿಗಳನ್ನು ಸಾಮೂಹಿಕವಾಗಿ ಕೊಲ್ಲಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಸೋಂಕಿತ ಹಂದಿಗಳ ಮಾಲೀಕರಿಗೆ ಪರಿಹಾರ ಮೊತ್ತ ನೀಡಲಾಗುತ್ತಿದೆ.

ಸೋಂಕು ತಡೆಗಟ್ಟಲು ಎರಡು ವಲಯಗಳನ್ನು ರಚಿಸಲಾಗಿದೆ, ಒಂದು ಸೋಂಕಿತ ವಲಯ ಇನ್ನೊಂದು ಕಣ್ಗಾವಲು ವಲಯವಾಗಿದೆ. ಇನ್ನೇನು ಎರಡು ದಿನದಲ್ಲಿ ಸಮೀಕ್ಷೆ ಪೂರ್ಣವಾಗಲಿದೆ. ನಂತರ ಸೋಂಕಿತ ವಲಯದಲ್ಲಿ ಹಂದಿಗಳನ್ನು ಕೊಲ್ಲಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!