Sunday, December 3, 2023

Latest Posts

350 ವರ್ಷಗಳ ಬಳಿಕ ಭಾರತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ `ವ್ಯಾಘ್ರ ನಖ’’ ಆಯುಧ ವಾಪಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಂಡನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji) `ವ್ಯಾಘ್ರ ನಖ’ (Wagh Nakh)( ಹುಲಿ ಉಗುರು) ಆಯುಧವು ಭಾರತಕ್ಕೆ ವಾಪಸ್ ಬರಲಿದೆ.

1659 ರಲ್ಲಿ ಬಿಜಾಪುರ (ಇಂದಿನ ವಿಜಯಪುರ) ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದರು.

ಪ್ರಸಕ್ತ ವರ್ಷದಲ್ಲೇ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಾಜಿ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಿಂದ (Victoria And Albert Museum) ವ್ಯಾಘ್ರ ನಖವನ್ನು ಮರಳಿ ತರಲಾಗುತ್ತಿದೆ. ಮಹಾರಾಷ್ಟ್ರಕ್ಕೆ ವ್ಯಾಘ್ರ ನಖವನ್ನು ತಂದ ಬಳಿಕ ಅದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ (Shivaji Maharaj Museum) ಇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ವಾಘ ನಖ ವಾಪಸ್ ತರಿಸಿಕೊಳ್ಳುವ ಪ್ರಕ್ರಿಯೆ ಪೂರೈಸಲು ಮಹಾರಾಷ್ಟ್ರ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆಭೇಟಿ ನೀಡಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ವ್ಯಾಘ್ರ ನಖವನ್ನು ನವೆಂಬರ್‌ನಲ್ಲಿ ತರುತ್ತಿದ್ದೇವೆ. ಅದಕ್ಕಾಗಿ MOUಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳು ಬಗೆದ ದಿನದಂದೇ ಅದನ್ನು ತರುವುದು ನಮ್ಮ ಪ್ರಯತ್ನ ಎಂದೂ ಸಚಿವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ನಾವು`ವ್ಯಾಘ್ರ ನಖ’ ಆಯುಧವನ್ನು ವಾಪಸ್ ತರುತ್ತಿದ್ದೇವೆ. ಇದಕ್ಕಾಗಿ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕುತ್ತಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಬಗೆದ ದಿನದಂದೇ ಆಯುಧವನ್ನು ವಾಪಸ್ ಕರೆ ತರುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಮರಾಠ ಸಾಮ್ರಜ್ಯವನ್ನು ವಿಸ್ತರಿಸುವಲ್ಲಿ 1659ರಲ್ಲಿ ನಡೆದ ಪ್ರತಾಪಗಢ ಯುದ್ಧದ ಗೆಲವು ನಿರ್ಣಯಾಕ ಪಾತ್ರವನ್ನು ವಹಿಸಿದೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮರಾಠರು, ಬಿಜಾಪುರದ ಆದಿಲ್ ಶಾಹಿ ಪಡೆಯ ನೇತೃತ್ವ ವಹಿಸಿದ್ದ ಅಫ್ಜಲ್ ಖಾನ್ ಸೇನೆಯನ್ನು ಸೋಲಿಸುತ್ತಾರೆ. ಆ ಮೂಲಕ ಛತ್ರಪತಿ ಶಿವಾಜಿ ಅವರು ಸೇನಾ ನಿಪುಣರಾಗಿ ಗುರುತಿಸಿಕೊಳ್ಳುತ್ತಾರೆ.ಛತ್ರಪತಿ ಶಿವಾಜಿಯ ಶೌರ್ಯ ಮತ್ತು ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಶತ್ರುವನ್ನು ಸೋಲಿಸುವ ತಂತ್ರವನ್ನು ಸಂಕೇತಿಸುವ ಈ ಪ್ರಸಂಗವು ಅಂದಿನಿಂದ ಜಾನಪದದ ಭಾಗವಾಗಿದೆ. ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಬೆನ್ನಿಗೆ (ಸಭೆಯ ಸಮಯದಲ್ಲಿ) ಇರಿದಾಗ, ಶಿವಾಜಿ ಮಹಾರಾಜ್ ಕ್ರೂರ, ರಾಕ್ಷಸ ಅಫ್ಜಲ್ ಖಾನ್ ಅನ್ನು ಕೊಲ್ಲಲು ‘ವಾಘ್ ನಖ್’ ಅನ್ನು ಬಳಸಿದ್ದರು ಎಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!