ಈ ಸಿನಿಮಾವನ್ನು ಮೂರು ಬಾರಿ ರಿಜೆಕ್ಟ್ ಮಾಡಿ ನಂತರ ಒಪ್ಪಿಕೊಂಡ್ರು ಕಾಜಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿಲ್ವಾಲೆ ಸಿನಿಮಾ ನಂತರ ಕಾಜಲ್ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಒಳ್ಳೆ ಸಿನಿಮಾ ಹಾಗೂ ಪಾತ್ರಕ್ಕಾಗಿ ಕಾಜಲ್ ಕಾಯುತ್ತಿದ್ದರು.

ಆದರೆ ಇದೀಗ ಸಲಾಂ ವೆಂಕಿ ಸಿನಿಮಾವನ್ನು ಕಾಜಲ್ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಕಾಜಲ್ ಕಾಣಿಸುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಮಗನ ಹಾಗೂ ತಾಯಿಯ ಸಂಬಂಧದ ಕಥೆ ಇದಾಗಿದೆ.

ಕಾಜೋಲ್ ಈ ಸಿನಿಮಾ ನಿರಾಕರಿಸೋಕೆ ಕಾರಣವೂ ಇದೆ. ಇದರಲ್ಲಿ ಮಗನ ಅನಾರೋಗ್ಯ, ಆತ ಅನುಭವಿಸಿದ ಕಷ್ಟಗಳು ಹೀಗೆ ಇವೆಲ್ಲವನ್ನೂ ನೋಡಿದಾಗ ಕಣ್ಣೀರು ಬರುತ್ತದೆ. ಯಾವ ತಾಯಿಯೂ ತನ್ನ ಮಕ್ಕಳಿಗೆ ಅನಾರೋಗ್ಯ ಆಗುವುದನ್ನು ಬಯಸುವುದಿಲ್ಲ. ಇಮ್ಯಾಜಿನ್ ಕೂಡ ಮಾಡುವುದಿಲ್ಲ. ಈ ಪಾತ್ರವನ್ನು ಮಾಡಲು ಮನಸ್ಸಿಗೆ ನೋವು ಆಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!