ರಿಷಬ್ ಪಂತ್ ಗೆ ಅಪಘಾತ: ಕೈಮುಗಿದು ಪ್ರಾರ್ಥಿಸುವ ಚಿತ್ರ ಹಂಚಿಕೊಂಡ ಊರ್ವಶಿ ರೌಟೇಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಡೀ ಜಗತ್ತು ರಿಷಬ್‌ ಚೇತರಿಕೆಗೆ ಹಾರೈಸುತ್ತಿದೆ. ಪಂತ್ ಅಪಘಾತಕ್ಕೀಡಾದ ಕೆಲವು ಗಂಟೆಗಳ ಬಳಿಕ ನಟಿ ಊರ್ವಶಿ ರೌಟೇಲಾ ತಾವು ದೇವರಲ್ಲಿ ‘ಪ್ರಾರ್ಥಿಸುತ್ತಿರುವುದಾಗಿʼ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಊರ್ವಶಿ ಎಲ್ಲಿಯೂ ರಿಷಬ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ನೆಟ್ಟಿಗರು, ಇದು ರಿಷಬ್​ಗಾಗಿಯೇ ಹಾಕಿರುವ ಪೋಸ್ಟ್ ಎಂದು ಹೇಳುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಊರ್ವಶಿ “ಮಿಸ್ಟರ್ ಆರ್‌ ಪಿ” ಎಂಬ ವ್ಯಕ್ತಿ ತನಗಾಗಿ ಹೋಟೆಲ್‌ ನಲ್ಲಿ ಕಾದಿದ್ದು 17 ಬಾರಿ ಕರೆ ಮಾಡಿದ್ದ. . ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು. ಆ ಬಳಿಕ ರಿಷಬ್ ಮತ್ತು ಊರ್ವಶಿ ಸಾಮಾಜಿಕ ಮಾಧ್ಯಮದಲ್ಲಿ ಜಗಳವಾಡಿದ್ದರು. ಆ ಬಳಿಕ ಅವರಿಬ್ಬರ ಸಂಬಂಧ ಹದಗೆಟ್ಟಿತ್ತು. ಇಬ್ಬರು Instagram ನಲ್ಲಿ ಪರಸ್ಪರ ರಹಸ್ಯ ಸಂದೇಶಗಳನ್ನು ಹಂಚಿಕೊಂಡು ಕಿತ್ತಾಡಿದ್ದರು. ಕೊನೆಗೆ ಸೋತಿದ್ದ ಊರ್ವಶಿ ರಿಶಬ್‌ ಪಂತ್‌ ಬಳಿ ತನ್ನದು ತಪ್ಪಾಯ್ತು ಎಂದು ಕೈಮುಗಿದು ಕ್ಷಮೆ ಕೇಳಿದ್ದರು.
ಶುಕ್ರವಾರ ಊರ್ವಶಿ ತನ್ನ ಇನ್‌ಸ್ಟಾಗ್ರಾಮ್‌ ಲ್ಲಿ ಕೈಮುಗಿದಿರುವ ಚಿತ್ರದೊಂದಿಗೆ ಊರ್ವಶಿ ಹೃದಯದ ಸಿಂಬಲ್‌ ಮತ್ತು ಮತ್ತು ಪಾರಿವಾಳದ ಎಮೋಜಿಯನ್ನು ಹಾಕಿದ್ದಾರೆ. ಅವರು ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!