Monday, August 8, 2022

Latest Posts

ಉಪ ಚುನಾವಣೆ ಬಳಿಕ ಎರಡು ಭಾಗವಾಗಲಿದೆ ಕಾಂಗ್ರೆಸ್ ಪಕ್ಷ: ನಳಿನ್ ಕುಮಾರ್ ಕಟೀಲ್

ಹೊಸ ದಿಗಂತ ವರದಿ, ಬಾಗಲಕೋಟೆ:

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ಈ ಹಿಂದೆ ಏಕವಚನದಲ್ಲಿ ಬಯ್ದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕಾಂಗ್ರೆಸ್ಸಿಗೆ ಸೇರಿ ಅಧಿಕಾರಕ್ಕೆ ಸೋನಿಯಾ ಗಾಂಧಿ ಅವರಿಗೆ ಕಾಲಿಗೆ ಬೀಳುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ಮಾಡಿದರು.
ಇಲ್ಲಿಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಉಪಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದೂ ಭವಿಷ್ಯ ನುಡಿದರು.
ಕಾಂಗ್ರೆಸ್ ಗೆ ಜಾತಿ ರಾಜಕಾರಣ ಬಿಟ್ರೆ ಉಪಚುಣಾವಣೆಯಲ್ಲಿ ಬೇರೆ ಅಸ್ತ್ರನೇ ಇಲ್ಲಾ. ಗಾಂಧಿ ಕಟ್ಟಿದ ಕಾಂಗ್ರೆಸ್ ಇಂದು ವೈಚಾರಿಕ ದಿವಾಳಿತನದಿಂದ ತುಕ್ಡೆ ತುಕ್ಡೆ ಎನ್ನುವವರ ಗ್ಯಾಂಗ್ ಆಗಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲಾಗದ, ಒಂದು ಪೂರ್ಣ ಸಮಿತಿಯನ್ನೂ ರಚನೆ ಮಾಡಲಾಗದ ಕಾಂಗ್ರೆಸ್ ದೇಶ ಮತ್ತು ರಾಜ್ಯವನ್ನು ಆಳಲು ಅಸಮರ್ಥ ಎಂಬುದು ಪಕ್ಕಾ ಆಗಿದೆ ಎಂದರು.
ಸಿಂದಗಿ, ಹಾನಗಲ್ ಎರಡು ಉಪ ಚುಣಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ ಪರ ಜನಪರ, ರಾಷ್ಟ್ರ ಪರ ವಿಚಾರಗಳಿಗೆ ಜನ ಮನ್ನಣೆ ಸಿಗಲಿದೆ. ಉಪ ಚುನಾವಣೆ ಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯ ಭೇರಿ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss