ಐಪಿಎಲ್ ವಿರುದ್ಧ ಬೇಸರ ವ್ಯಕ್ತಪಡಿಸಿದ ಯೂನಿವರ್ಸಲ್​ ಬಾಸ್ ಗೇಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  

ಐಪಿಎಲ್​ನಲ್ಲಿ ನನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ ಮತ್ತು ಯಾವುದೇ ಗೌರವವನ್ನು ನೀಡಲಿಲ್ಲ ಹಾಗಾಗಿ ಹೊರಗಡೆ ಉಳಿಯುವ ನಿರ್ಧಾರ ತೆಗೆದುಕೊಂಡೆ ಎಂದು ಯೂನಿವರ್ಸಲ್​ ಬಾಸ್ ವೆಸ್ಟ್​ಇಂಡೀಸ್​ ದೈತ್ಯ ಕ್ರಿಸ್​ ಗೇಲ್ ಗಂಭೀರ ಆರೋಪ ಮಾಡಿದ್ದಾರೆ.
ಐಪಿಎಲ್​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕ್ರಿಸ್​ ಗೇಲ್​ ಸ್ಟಾರ್​ ಆಟಗಾರರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಗೇಲ್​ಗೆ ಬೌಲಿಂಗ್​ ಮಾಡಲು ಎಲ್ಲ ಬೌಲರ್​ಗಳು ಎದುರುತ್ತಿದ್ದರು. ಆದರೆ, ಈ ಸೀಸನ್​ನಲ್ಲಿ ಹರಾಜು ಪ್ರಕ್ರಿಯೆಗೆ ಗೇಲ್​ ಪ್ರವೇಶ ನೀಡಲಿಲ್ಲ.
ಈ ಬಗ್ಗೆ ಮಾತನಾಡಿರುವ ಗೇಲ್​, ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಕ್ರೀಡೆ ಮತ್ತು ಐಪಿಎಲ್‌ಗಾಗಿ ಸಾಕಷ್ಟು ಶ್ರಮಿಸಿದರೂ ನನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ನಾನು ಭಾವಿಸಿದೆ. ಎಲ್ಲವೂ ಓಕೆ ಎಂಬ ಭಾವನೆಯಲ್ಲಿ ಸುಮ್ಮನಾಗಿದ್ದೇನೆ. ನಾನು ಮತ್ತೆ ಪ್ರವೇಶಿಸಲು ಚಿಂತಿಸುವುದಿಲ್ಲ. ಕ್ರಿಕೆಟ್ ನಂತರದ ಜೀವನ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ನಾನು ಸಾಮಾನ್ಯತೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಗೇಲ್ ಕೊನೆಯದಾಗಿ ವೆಸ್ಟ್ ಇಂಡೀಸ್ ತಂಡಕ್ಕಾಗಿ 2021ರಲ್ಲಿ ನಡೆದ ಐಸಿಸಿ ಪುರುಷರ T20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬುಧಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಇದಲ್ಲದೆ, ಅವರು ಕೊನೆಯ ಬಾರಿಗೆ ಫೆಬ್ರವರಿ 18 ರಂದು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) 2022 ನಲ್ಲಿ T20 ಕ್ರಿಕೆಟ್ ಆಡಿದ್ದಾರೆ. ಸದ್ಯ ಕ್ರೀಡೆಯಿಂದ ಹೊರಗುಳಿದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೊಲ್ಕತ ನೈಟ್​ ರೈಡರ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ಕಿಂಗ್ಸ್​ ಪರ ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನವನ್ನು ಗೇಲ್​ ನೀಡಿದ್ದಾರೆ. ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಗೇಲ್​ 6 ಶತಕಗಳನ್ನು ಬಾರಿಸಿದ್ದು, 142 ಪಂದ್ಯಗಳಲ್ಲಿ 4965 ರನ್​ ಗಳಿಸುವ ಮೂಲಕ ಹೆಚ್ಚು ರನ್​ ಕಲೆಹಾಕಿದ 7ನೇ ಆಟಗಾರನೆಂಬ ಖ್ಯಾತಿ ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!