ಅಗಲ್ಪಾಡಿ ಜಾತ್ರಾ ಮಹೋತ್ಸವ, ವಿಶೇಷ ಲಲಿತಾ ಸಹಸ್ರನಾಮ ಪಾರಾಯಣ

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಸಂದರ್ಭ, ಬುಧವಾರ ವಿಶೇಷ ಲಲಿತಾ ಸಹಸ್ರನಾಮ ಪಾರಾಯಣ ಜರಗಿತು. ಲಲಿತಾಸಹಸ್ರನಾಮ ಪಾರಾಯಣ ಬಳಗ ಹಾಗೂ ಅಗಲ್ಪಾಡಿ ಶ್ರೀ ಕ್ಷೇತ್ರದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಮಾತೆಯರೂ ಮಹನೀಯರೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಪ್ರವಚನವನ್ನು ನೀಡಿದ ವೇದಮೂರ್ತಿ ವೆಂಕಟೇಶ ಭಟ್ ಕೂವೆಕ್ಕಲ್ಲು ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಕೊರೊನಾ ಕಾಲಘಟ್ಟದಲ್ಲಿ ಯಾರೂ ಮನೆಯಿಂದ ಹೊರಹೋಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ೨೦೨೦ರ ನವರಾತ್ರಿಯ ಸಂದರ್ಭದಲ್ಲಿ ವಾಟ್ಸಪ್ ಬಳಗದ ಮೂಲಕ ಲಲಿತಾ ಸಹಸ್ರನಾಮ ಪಾರಾಯಣ ಆರಂಭಗೊಂಡಿತ್ತು. ಅಂದು ಸುಮಾರು ೧೦೦ರಷ್ಟು ಕುಟುಂಬಗಳು ಪಾಲ್ಗೊಂಡು ನಂತರ ಪ್ರತೀ ಶುಕ್ರವಾರದಂದು ಪಾರಾಯಣ ಮಾಡಲಾಗುತ್ತಿತ್ತು. ಲಲಿತಾ ಸಹಸ್ರನಾಮ ಪಾರಾಯಣದ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಜರಗಿತು.
ಜಾತ್ರೆಯ ಪ್ರಯುಕ್ತ ಇಂದು ಗುರುವಾರ ಬೆಳಗ್ಗೆ ೭:೩ಕ್ಕೆ ಉಷಃಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ ೧೧:೩೦ಕ್ಕೆ ಶ್ರೀ ಜಟಾಧಾರೀ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಸ್ವೀಕಾರ; ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂತರ್ಪಣೆ; ಸಂಜೆ ೫:೩೦ಕ್ಕೆ ಭಜನೆ (ಶ್ರೀ ಮಹಮ್ಮಾಯಿ ಭಜನಾ ಸಂಘ, ಮಾರ್ಪನಡ್ಕ), ರಾತ್ರಿ ೮:೦೦ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ ಜರಗಲಿದೆ.
ದಿನಾಂಕ ೧೧ರಂದು ಶುಕ್ರವಾರ ಬೆಳಗ್ಗೆ ಕವಾಟೋದ್ಘಾಟನ, ಉಷಃಪೂಜೆ, ಪೂರ್ವಾಹ್ನ ೧೦:೦೦ಕ್ಕೆ ಶ್ರೀ ಭೂತಬಲಿ, ಅವಭೃತ, ನೃತ್ತ, ಬಟ್ಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಹಾಪೂಜೆ, ಸಂತರ್ಪಣೆ,
ಸಂಜೆ ೬:೩೦ಕ್ಕೆ ಭಜನೆ (ಶ್ರೀ ಧರ್ಮಶಾಸ್ತಾರ ಭಜನಾ ಸಂಘ ಕುರುಮುಜ್ಜಿಕಟ್ಟೆ)
ರಾತ್ರಿ ೮:೦೦ಕ್ಕೆ ಮಹಾಪೂಜೆ. ರಾತ್ರಿ ೨:೩೦ಕ್ಕೆ ಶ್ರೀ ಜಟಾಧಾರೀ ದೈವದ ಮಹಿಮೆ, ಅರಸಿನಹುಡಿ ಪ್ರಸಾದ ಸ್ವೀಕಾರದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಚಿತ್ರ: ೦೯ ಬಿಎ ಅಗಲ್ಪಾಡಿ : ವಿಶೇಷ ಲಲಿತಾ ಸಹಸ್ರನಾಮ ಪಾರಾಯಣ
೦೯ ಬಿಎ ಅಗಲ್ಪಾಡಿ೧ : ವಿಶೇಷ ಪ್ರವಚನವನ್ನು ನೀಡಿದ ವೇದಮೂರ್ತಿ ವೆಂಕಟೇಶ ಭಟ್ ಕೂವೆಕ್ಕಲ್ಲು ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!