ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನೆಡೆಸಿದ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 167 ರನ್ ಗುರಿ ನೀಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿದೆ. ಪಂಜಾಬ್ ಪರ ಮಯಾಂಕ್ ಅಗರ್ವಾಲ್ 58 ಬಾಲ್ಗೆ 99 ರನ್ ಗಳಿಸಿ ಮಿಂಚಿದ್ದಾರೆ. ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. ಡೇವಿಡ್ ಮಲನ್ 26 ರನ್ ದಾಖಲಿಸಿದ್ದಾರೆ. ಉಳಿದ ಆಟಗಾರರು ಅಷ್ಟೊಂದು ಉತ್ತಮ ಪ್ರದರ್ಶನ ತೋರಿಲ್ಲ.
ಡೆಲ್ಲಿ ಪರ ಅವೇಶ್ ಖಾನ್ ಹಾಗೂ ಅಕ್ಸರ್ ಪಟೇಲ್ ಉತ್ತಮ ದಾಳಿ ಸಂಘಟಿಸಿದ್ದಾರೆ. ಕಡಿಮೆ ರನ್ ಬಿಟ್ಟುಕೊಟ್ಟಿದ್ದಾರೆ. ರಬಾಡ 3 ವಿಕೆಟ್ ಪಡೆದು ಮಿಂಚಿದ್ದಾರೆ.