ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯಸ್ಸು ಅನ್ನೋದು ಸಂಖ್ಯೆಯಷ್ಟೇ. ಮನಸ್ಸು ಮಾಡಿದ್ರೆ, ಆರೋಗ್ಯ ಸಾಥ್ ಕೊಟ್ರೆ ಯಾರು ಏನನ್ನು ಬೇಕಾದರೂ ಮಾಡಬಹುದು. ಇದಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಸಾಕ್ಷಿಯಾಗಿದ್ದಾರೆ.
ಸಿನಿಮಾವೊಂದಕ್ಕೋಸ್ಕರ ಅನುಪಮ್ ತಮ್ಮ 68ನೇ ವಯಸ್ಸಿನಲ್ಲಿ ಸ್ವಿಮ್ಮಿಂಗ್ ಕಲಿತಿದ್ದಾರೆ.
ಮುಂದಿನ ವರ್ಷಗಳಲ್ಲಿ ನಾನು ಹೊಸದಾಗಿ ಏನನ್ನಾದರೂ ಕಲಿಯಲು ಪ್ರಯತ್ನಿಸುತ್ತೇನೆ. ಯಾವಾಗ ಏನು ಬೇಕಾದರೂ ಆಗಬಹುದು. ನನಗೆ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಆದರೆ, ಆ ನಿಟ್ಟಲ್ಲಿ ನಾನು ಶ್ರಮ ಹಾಕಿದೆ. ನೀವು ಕೂಡ ಹೊಸದನ್ನು ಕಲಿಯಲು ಇದು ಸ್ಫೂರ್ತಿ ನೀಡಬಹುದು. ಇಷ್ಟು ವರ್ಷ ನೀವು ನೀಡಿದ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು’ ಎಂದಿದ್ದರು ಅನುಪಮ್ ಖೇರ್.