ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಶಸ್ತ್ರ ಪಡೆಗಳಿಗೆ ಮತ್ತಷ್ಟು ಬಲ ನೀಡುವ ದೃಷ್ಟಿಯಿಂದ ರಾಡಾರ್ ಎಚ್ಚರಿಕೆ ರಿಸೀವರ್‌ಗಳನ್ನು ಉತ್ಪಾದಿಸಲು ಚಿಂತಿಸಲಾಗಿದ್ದು ಈ ಕುರಿತು ಡಿಜಿಟಲ್ ರಾಡಾರ್ ಗಳ ಉತ್ಪಾದನೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಡುವೆ ಒಪ್ಪಂದ ಏರ್ಪಟ್ಟಿದೆ.
ಡಿಜಿಟಲ್ ರಾಡಾರ್ ವಾರ್ನಿಂಗ್ ರಿಸೀವರ್‌ನ ತಂತ್ರಜ್ಞಾನವನ್ನು ವರ್ಗಾಯಿಸಲು DRDO ಅಡಿಯಲ್ಲಿ ಯುದ್ಧ ವಿಮಾನ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಏಕೀಕರಣ ಕೇಂದ್ರ (CASDIC) ದೊಂದಿಗೆ ತಂತ್ರಜ್ಞಾನ ವರ್ಗಾವಣೆಗೆ (LATOT) ಪರವಾನಗಿ ಒಪ್ಪಂದಕ್ಕೆ BEL ಸಹಿ ಮಾಡಿದೆ.
CASDIC ಕೇಂದ್ರವು ಫೈಟರ್ ಏರ್‌ಕ್ರಾಫ್ಟ್‌ಗಳಿಗೆ ವ್ಯವಸ್ಥೆಗಳು ಮತ್ತು ಪರಿಹಾರಗಳನ್ನು ಒದಗಿಸುವ ವಿಷಯದಲ್ಲಿ ಪರಿಣತಿಯನ್ನು ಹೊಂದಿದೆ.
ಡಿಜಿಟಲ್ ರಾಡಾರ್ ವಾರ್ನಿಂಗ್ ರಿಸೀವರ್ ಅತ್ಯಾಧುನಿಕ, ವಾಯುಗಾಮಿ ಎಲೆಕ್ಟ್ರಾನಿಕ್ ವಾರ್ಫೇರ್ ಸಿಸ್ಟಮ್ ಆಗಿದ್ದು, ಇದು ದಟ್ಟವಾದ ಸಿಗ್ನಲ್ ಸನ್ನಿವೇಶದಲ್ಲಿ ಅತ್ಯುತ್ತಮ ಸೂಕ್ಷ್ಮತೆ, ನಿಖರತೆ ಮತ್ತು ದಟ್ಟವಾದ ಸಂಕೇತದ ವಿರುದ್ಧ ಪ್ರತಿಬಂಧಿಸುವ ಹೆಚ್ಚಿನ ಸಂಭವನೀಯತೆಯೊಂದಿಗೆ ಫೈಟರ್ ಪ್ಲಾಟ್‌ಫಾರ್ಮ್‌ಗೆ ಬಹುಮುಖ ಸಾಂದರ್ಭಿಕ ಎಚ್ಚರಿಕೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸಲಿದೆ.
ಒಪ್ಪಂದದ ಮೂಲಕ, ಉತ್ಪನ್ನದ ಕಾರ್ಯಚಟುವಟಿಕೆಗೆ ಅಗತ್ಯವಾದ ಡೇಟಾದೊಂದಿಗೆ ಗುಣಮಟ್ಟದ ಭರವಸೆಗಾಗಿ ತಾಂತ್ರಿಕ ಜ್ಞಾನ, ಪರೀಕ್ಷೆ ಮತ್ತು ನಿರ್ವಹಣೆ ವಿಧಾನದ ಸಂಪೂರ್ಣ ವಿವರಗಳನ್ನು CASDIC ಕೇಂದ್ರವು ಬಿಇಎಲ್ ಗೆ ವರ್ಗಾಯಿಸುತ್ತದೆ ಎನ್ನಲಾಗಿದೆ.