Sunday, August 14, 2022

Latest Posts

ಶೇಂಗಾ ಬೆಳೆಯ ವಿವಿಧ ತಳಿಗಳ ವೀಕ್ಷಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ,ಚಿತ್ರದುರ್ಗ :

ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದ ರೈತರಾದ ನಾಗಪ್ಪ ಬಿನ್ ವೀರಣ್ಣ ಅವರ ಜಮೀನಿನಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಶೇಂಗಾ ಬೆಳೆಯ ವಿವಿಧ ತಳಿಗಳ ವೀಕ್ಷಣೆ ಮಾಡಿದರು.
ಟಿಎಂವಿ-೨, ಕದರಿ ಲೇಪಾಕ್ಷಿ-೧೮೧೨, ಜಿ-೨-೫೨, ಡಿ.ಹೆಚ್-೨೫೬, ಕೆ-೯ ಸೇರಿದಂತೆ ಶೇಂಗಾ ಬೆಳೆಯ ವಿವಿಧ ತಳಿಗಳ ವೀಕ್ಷಣೆ ಮಾಡಿ, ಶೇಂಗಾ ತಳಿಯ ವೈಶಿಷ್ಠ್ಯತೆಗಳ ಕುರಿತು ಮಾಹಿತಿ ಪಡೆದರು.
ರಾಗಿ ಬೆಳೆಯಲ್ಲಿ ನಾಟಿ ಪದ್ಧತಿ: ನಾಟಿ ಪದ್ಧತಿ ಮೂಲಕ ರಾಗಿ ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೂರಿಗೆ ಪದ್ಧತಿಗಿಂತ ನಾಟಿ ಪದ್ಧತಿ ರಾಗಿಯಿಂದ ಅಧಿಕ ಇಳುವರಿ ಪಡೆಯಬಹುದು. ರೊಗ, ಕೀಟ ಬಾಧೆ ಕಡಿಮೆ ಇರುತ್ತದೆ ತೆಂಡೆಗಳ ಸಂಖ್ಯೆ ಕೂರಿಗೆ ಪದ್ದತಿಯಲ್ಲಿ ೪ ರಿಂದ ೬ ಇದ್ದರೆ ನಾಟಿ ಪದ್ಧತಿಯಲ್ಲಿ ತೆಂಡೆಗಳ ಸಂಖ್ಯೆ ೧೫ ರಿಂದ ೨೦ ಇರುತ್ತವೆ ಎಂದರು. ಇದೇ ಸಂದರ್ಭದಲ್ಲಿ ನಡಕಟ್ಟಿನ ಕೂರಿಗೆಯಿಂದ ನವಣೆ ಬಿತ್ತನೆ ಮಾಡಲಾಯಿತು.
ಡ್ರೋನ್‌ನಿಂದ ಕೀಟನಾಶಕ ಸಿಂಪರಣೆ : ಹತ್ತಿ ಬೆಳೆಗೆ ಡ್ರೋನ್ ಮೂಲಕ ಇಮಿಡಾಕ್ಲೊಪ್ರಿಡ್ ಸಿಂಪರಣೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಕೃಷಿ ವಲಯದಲ್ಲೂ ಡ್ರೋನ್‌ಗಳ ಬಳಕೆ ಅವಶ್ಯಕತೆಯಾಗಿ ಮಾರ್ಪಾಡಾಗಿದೆ.
ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ಕೃಷಿ ನಿರ್ದೇಶಕ ಡಾ.ಬಿ.ವೈ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss