ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫ್ಲೈಯಿಂಗ್ ಸಿಬ್ಬಂದಿಗೆ ‘ಪ್ಯಾನ್ ಇಂಡಿಯಾ’ ಆಧಾರದ ಮೇಲೆ ಲಸಿಕೆ ನೀಡದಿದ್ದರೆ ವಿಮಾನ ಹಾರಾಟ ಸ್ಥಗಿತ: ಐಸಿಪಿಎ ಎಚ್ಚರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಮಾನಯಾನದ ಫ್ಲೈಯಿಂಗ್ ಸಿಬ್ಬಂದಿಗೆ ‘ಪ್ಯಾನ್ ಇಂಡಿಯಾ’ ಆಧಾರದ ಮೇಲೆ ಲಸಿಕೆ ಶಿಬಿರ ಸ್ಥಾಪಿಸಲು ಸಂಸ್ಥೆ ವಿಫಲವಾದರೆ ತಮ್ಮ ಕೆಲಸ ನಿಲ್ಲಿಸುವುದಾಗಿ ಏರ್ ಇಂಡಿಯಾ ಪೈಲಟ್‌ಗಳ ಒಕ್ಕೂಟ(ಐಸಿಪಿಎ) ಹೇಳಿದೆ.
ವಿಮಾನ ಹಾರಾಟ ಸಿಬ್ಬಂದಿಗೆ ಯಾವುದೇ ಆರೋಗ್ಯ ಸೌಕರ್ಯಗಳಿಲ್ಲ. ವಿಮೆ ಇಲ್ಲ, ಮತ್ತು ಭಾರಿ ವೇತನ ಕಡಿತವಿದೆ. ವ್ಯಾಕ್ಸಿನೇಷನ್ ಇಲ್ಲದೆ ನಮ್ಮ ಪೈಲಟ್‌ಗಳ ಜೀವವನ್ನು ಅಪಾಯಕ್ಕೆ ತಳ್ಳುವ ಸ್ಥಿತಿ ಎದುರಾಗಿದೆ ಎಂದು ಏರ್ ಇಂಡಿಯಾದ ಕಾರ್ಯಾಚರಣೆಯ ನಿರ್ದೇಶಕ ಆರ್.ಎಸ್. ಸಂಧು ಹೇಳಿದ್ದಾರೆ.
ನಮ್ಮ ಹಣಕಾಸು ಈಗಾಗಲೇ ಹಾಸಿಗೆ ಹಿಡಿದ ಸಹೋದ್ಯೋಗಿಗಳು ಒಳಗೊಂಡಂತೆ ಕುಟುಂಬಸ್ಥರಿಗೆ ನೀಡಲು ಸಾಕಾಗುತ್ತಿಲ್ಲ. ನಮ್ಮ ಅಜಾಗರೂಕತೆಯಿಂದ ಮಾರಣಾಂತಿಕ ವೈರಸ್‌ ನಮ್ಮ ಕುಟುಂಬಸ್ಥರಿಗೆ ತಗುಲದಂತೆ ನಾವು ಸದಾ ಜಾಗೃತರಾಗಿರಬೇಕಿದೆ.
ಅದರಿಂದ ಆದ್ಯತೆಯ ಮೇರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ವಿಮಾನ ಹಾರಾಟ ಸಿಬ್ಬಂದಿಗೆ ಪ್ಯಾನ್ ಇಂಡಿಯಾ ಆಧಾರದ ಮೇಲೆ ವ್ಯಾಕ್ಸಿನೇಷನ್ ಕ್ಯಾಂಪ್‌ಗಳನ್ನು ಸ್ಥಾಪಿಸಲು ಏರ್ ಇಂಡಿಯಾ ವಿಫಲವಾದರೆ, ನಾವು ನಮ್ಮ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅನೇಕ ಸಿಬ್ಬಂದಿ ಸದಸ್ಯರನ್ನು ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾಗಿದೆ. ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss