ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (NCR) ಗಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan-4) ಕ್ರಮಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಮಾಲಿನ್ಯ ಮಟ್ಟವನ್ನು ನಿರ್ವಹಿಸಲು GRAP-2 ಕ್ರಮಗಳನ್ನು ಜಾರಿಗೆ ತರಲು ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ (CAQM) ಅನುಮತಿ ನೀಡಿದೆ.
ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟವು 400 ದಾಟಿದಾಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ-4 ನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ GRAP ನಿರ್ಬಂಧಗಳ ಹಂತ 2 ರ ಕೆಳಗೆ ಹೋಗದಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಪ್ರದೇಶದಲ್ಲಿ ಎಕ್ಯುಐ ಮತ್ತಷ್ಟು ಸುಧಾರಿಸುವವರೆಗೆ GRAP-3 ನಿಂದ ಕೆಲವು ಹೆಚ್ಚುವರಿ ಕ್ರಮಗಳನ್ನು ನಿರ್ಬಂಧಗಳಲ್ಲಿ ಸೇರಿಸಲು ಆಯೋಗಕ್ಕೆ ಸಲಹೆ ನೀಡಿದೆ.
ಕಳೆದ ಒಂದು ತಿಂಗಳಿನಿಂದ ನಿರಂತರ ವಾಯು ಮಾಲಿನ್ಯದ ವಿರುದ್ಧ ಹೋರಾಡಿದ ನಂತರ, ದೆಹಲಿಯ ಗಾಳಿಯ ಗುಣಮಟ್ಟವು ಸಾಕಷ್ಟು ಸುಧಾರಣೆಯನ್ನು ಕಂಡಿತು, ವಾಯು ಗುಣಮಟ್ಟ ಸೂಚ್ಯಂಕ (AQI) 161ರಲ್ಲಿ ದಾಖಲಾಗಿದೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರ್ಗೀಕರಣದ ಪ್ರಕಾರ, 0-50 ನಡುವಿನ ಎಕ್ಯುಐನ್ನು ‘ಉತ್ತಮ’, 51-100 ‘ತೃಪ್ತಿದಾಯಕ’, 101-200 ಮಧ್ಯಮ, 201-300 ಕಳಪೆ, 301 ಎಂದು ವರ್ಗೀಕರಿಸಲಾಗಿದೆ.