ಉಕ್ರೇನ್‌ ದಾಳಿ ತೀವ್ರಗೊಳಿಸಿದ ರಷ್ಯಾ: ರಾಜಧಾನಿ ಕೀವ್‌, ಸುಮಿ ಪ್ರದೇಶಗಳಲ್ಲಿ ಸೈರನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ರಷ್ಯಾ ಪಡೆಗಳು ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಲಿದೆ. ಈ ನಡುವೆ ರಾಜಧಾನಿ ಕೀವ್‌ ನ ಮೇಲೆ ರಷ್ಯಾ ಆಕ್ರಮಣ ಶುರುವಾಗಿದ್ದು, ಹಲವೆಡೆ ದಾಳಿಯ ಸೈರನ್‌ ಕೇಳಿರುವ ಬಗ್ಗೆ ವರದಿಯಾಗಿದೆ.

ಉಕ್ರೇನ್‌ ರಾಜಧಾನಿ ಕೀವ್‌, ಒಡೆಸ್ಸಾದ ಲವಿವಿ ನಗರ, ಹಾರ್ಕೀವ್‌, ಸುಮಿ ಸೇರಿದಂತೆ ಹಲವೆಡೆ ವಾಯು ದಾಳಿಯ ಸೈರನ್‌ ಕೇಳಿಬರುತ್ತಿರುವುದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್‌ ರಕ್ಷಣಾ ಪಡೆ, ಕೀವ್‌ ಪ್ರದೇಶದಿಂದ ಕೇವಲ 25 ಕಿ.ಮೀ. ದೂರದಲ್ಲಿ ರಷ್ಯಾ ಸೇನೆ ನೆಲೆಯೂರಿದೆ ಎಂದು ತಿಳಿಸಿದೆ. ಕಳೆದ 12 ದಿನಗಳ ದಾಳಿಯಲ್ಲಿ ಮುರಿಪೊಲ್‌ ನಗರ ಒಂದರಲ್ಲೇ ಸುಮಾರು 1500 ಜನರಯ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಉಕ್ರೇನ್‌ ಅಧ್ಯಕ್ಷ ವ್ಲೋಡಮೀರ್‌ ಝೆಲೆನ್ಸ್ಕಿ ನಗರದಲ್ಲಿ ಆಹಾರ, ನೀರು ಇಲ್ಲದೆ ಸಿಲುಕಿರುವವರನ್ನು ಬೇರೆಡೆ ಸ್ಥಳಾಂತರಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಕಳೆದ ಅನೇಕ ದಿನಗಳಿಂದ ರಷ್ಯಾದ ಆಕ್ರಮಣ ಹೆಚ್ಚಾಗುತ್ತಿದ್ದು, ಗರ್ಭಿಣಿಯರ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!