Sunday, August 14, 2022

Latest Posts

ಎರಡನೇ ಪ್ರಯೋಗಾರ್ಥ ಸಂಚಾರ ಆರಂಭಿಸಿದ ಸ್ವದೇಶಿ ನಿರ್ಮಿತ ಐಎನ್’ಎಸ್ ವಿಕ್ರಾಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ ಐಎನ್’ಎಸ್ ವಿಕ್ರಾಂತ್ ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ.
ಭಾನುವಾರ ಕೊಚ್ಚಿಯಿಂದ ಅರಬ್ಬಿ ಸಮುದ್ರಕ್ಕೆ ಪ್ರಯಾಣ ಬೆಳೆಸಿದೆ.
ವಿಕ್ರಾಂತ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧ ನೌಕೆಯಾಗಿದೆ. ಈ ಮೊದಲು ಆಗಸ್ಟ್ ನಲ್ಲಿ 5 ದಿನಗಳ ಕಾಲ ಮೊದಲ ಪ್ರಯೋಗಾರ್ಥ ಸಂಚಾರ ನಡೆಸಿತ್ತು.
ಆಗಸ್ಟ್ 2022ರೊಳಗೆ ಐಎನ್ ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.
40,000 ಟನ್ ತೂಕದ ವಿಮಾನವಾಹಕ ಯುದ್ಧನೌಕೆ ಮೊದಲ ದಿನದ ಪ್ರಯೋಗಾರ್ಥ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ.
ಐಎನ್ ಎಸ್ ವಿಕ್ರಾಂತ್ ಯುದ್ದ ನೌಕೆ ದೇಶೀಯವಾಗಿ ವಿನ್ಯಾಸಗೊಂಡು ನಿರ್ಮಿಸಲಾಗಿದೆ. ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ’ ಭಾಗವಾಗಿ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss