ವಿಶೇಷಚೇತನರ ಪ್ರಯಾಣಕ್ಕೆ ಅಡ್ಡಿ ಮಾಡಬೇಡಿ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿರ್ದೇಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಮಾನದಲ್ಲಿ ವಿಕಲಾಂಗರ ಪ್ರಯಾಣಕ್ಕೆ ಅವಕಾಶ ನೀಡುವಂತೆ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಆದೇಶಿಸಿದೆ. ಯಾವುದೇ ಅಂಗವೈಕಲ್ಯವಿದೆ ಎಂಬ ಕಾರಣ ನೀಡಿ ವಿಮಾನ ಪ್ರಯಾಣಕ್ಕೆ ಅಡ್ಡಿಯಾಗದಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ  ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಡಿಸಿಜಿಎ ಸೂಚನೆಗಳು

  • ಅಂಗವೈಕಲ್ಯ ಕಾರಣ ನೀಡಿ ಪ್ರಯಾಣಕ್ಕೆ ಅಡ್ಡಿ ಉಂಟುಮಾಡುವಂತಿಲ್ಲ
  • ವಿಮಾನ ಪ್ರಯಾಣ ಆ ವ್ಯಕ್ತಿಯ ಆರೋಗ್ಯಕ್ಕೆ ಹಾನಿ ಎಂದು ಖಚಿತವಾದ ಬಳಿಕ ನಿರಾಕರಿಸಬೇಕು
  • ಅದಕ್ಕೂ ಮೊದಲು ವೈದ್ಯರ ಸಲಹೆ ಪಡೆದ ಬಳಿ ಈ ತೀರ್ಮಾನ ಮಾಡಬೇಕು
  • ವೈದ್ಯರು ವಿಕಲಚೇತನ ವ್ಯಕ್ತಿಯ ಆರೋಗ್ಯ ಪರಿಶೀಲನೆ ನಡೆಸಬೇಕು
  • ಆ ವ್ಯಕ್ತಿ ಪ್ರಯಾಣ ಮಾಡಬೇಕಾ..?ಬೇಡವಾ ಎಂಬುದು ವೈದ್ಯರಿಗೆ ಬಿಟ್ಟ ವಿಚಾರ
  • ಕಾಲಕಾಲಕ್ಕೆ ತಕ್ಕಂತೆ ನಿಯಮಾವಳಿ ಬದಲಾವಣೆ ಮಾಡುವುದಾಗಿ ಡಿಜಿಸಿಎ ಸೂಚನೆ

ಇತ್ತೀಚೆಗಷ್ಟೇ ರಾಂಚಿಯಲ್ಲಿ ವಿಕಲಾಂಗ ಬಾಲಕನೊಬ್ಬನಿಗೆ ಇಂಡಿಗೋ ಏರ್ ಲೈನ್ಸ್ ವಿಮಾನ ಹತ್ತಲು ಅವಕಾಶ ನೀಡಿರಲಿಲ್ಲ. ಪ್ರಕರಣದ ತನಿಖೆ ನಡೆಸಿದ ಡಿಜಿಸಿಎ ಕಂಪನಿಗೆ 5 ಲಕ್ಷ ರೂ. ದಂಡ ವಿಧಿಸಿತು. ಹಾಗಾಗಿ ಇನ್ನು ಮುಂದೆ ಇಂತಹ ಅಚಾತುರ್ಯಗಳು ನಡೆಯದಂತೆ ವಿಮಾನಯಾನ ಸಂಸ್ಥೆಗಳಿಗೆ ಕೆಲವು ಸಲಹೆಗಳನ್ನು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!