spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಏರ್‌ಟೆಲ್‌ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ಡೇಟಾ, ಕರೆ ದರದಲ್ಲಿ ಭಾರೀ ಹೆಚ್ಚಳ

- Advertisement -Nitte

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್‌ ಇಂದಿನಿಂದ ಡೇಟಾ ಮತ್ತು ಕರೆಗಳ ದರವನ್ನು ಹೆಚ್ಚಳ ಮಾಡಿದೆ. ಏರ್‌ಟೆಲ್‌ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ ಇದಾಗಿದ್ದು, ತನ್ನ ಪ್ರೀಪೇಯ್ಡ್‌ ಯೋಜನೆಯ ಬೆಲೆಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಕಂಪನಿ ಘೋಷಿಸಿದೆ.

ಹೊಸ ದರಗಳು ಕರೆ ಯೋಜನೆಗಳಿಗೆ ಶೇ.20ರಷ್ಟು, ಅನಿಯಮಿತ ಕರೆ ಮತ್ತು ಡೇಟಾ ಯೋಜನೆ ಪ್ಯಾಕ್‌ಗಳು ಮತ್ತು ಡೇಟಾ ಟಾಪ್‌ಅಪ್‌ ರೀಚಾರ್ಜ್‌ಗಳ ಮೇಲೆ ಶೇ.25ರಷ್ಟು ದರ ಹೆಚ್ಚಳ ಮಾಡಿದೆ.

ಈ ಯೋಜನೆಗಳ ಹೊಸ ಬದಲಾವಣೆಗಳು ಇಂದಿನಿಂದಲೇ ಜಾರಿಗೆ ಬಂದಿದೆ. ಏರ್‌ಟೆಲ್‌ನ ಪ್ರವೇಶ ಮಟ್ಟದ ಕರೆ ಯೋಜನೆಯೂ ಈಗ ಶೇ.25ರಷ್ಟು ಹೆಚ್ಚಾಗಿದ್ದು, ಗ್ರಾಹಕರಿಗೆ ತಲೆಬಿಸಿಯಾಗಿದೆ. ಹೆಚ್ಚಳದ ಪ್ರಕಾರ, 79ರೂ. ಧ್ವನಿ ಯೋಜನೆಗೆ ಈಗ 99ರೂ. ವೆಚ್ಚವಾಗಲಿದೆ. 99ರೂ.ಗೆ 200 ಎಂಬಿ ಡೇಟಾ, 1ಪಿ/ಸೆಕೆಂಡು ಧ್ವನಿ ಸುಂಕ ಮೌಲ್ಯದ ಶೇ. 50 ರಷ್ಟು ಹೆಚ್ಚಿನ ಟಾಕ್ ಟೈಮ್ ಅನ್ನು ನೀಡುತ್ತದೆ ಎನ್ನಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss