ಮೊದಲ ವಾರವೇ ಬಿಗ್‌ ಬಾಸ್‌ ಮನೆಯಿಂದ ಐಶ್ವರ್ಯಾ ಪಿಸ್ಸೆ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಟಿಟಿ ಬಳಿಕ ಇದೀಗ ಟಿವಿ ಪರದೆಯ ಮುಂದೆ ಕಾಣಿಸಿಕೊಳ್ಳುತ್ತಿರುವ ಬಿಗ್ ಬಾಸ್ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಬಿಗ್‌ ಬಾಸ್‌ ಗೆ ಬಂದಿದ್ದವರು- ಹೊಸಬರ ನಡುವಿನ ನಗು-ಖುಷಿ- ಜಗಳ- ಮುನಿಸು-ಗಲಾಟೆ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಮೊದಲ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಿತ್ತು. ಮೊದಲವಾರವೇ ಬಿಗ್‌ ಬಾಸ್‌ ಅಚ್ಚರಿ ನೀಡಿದ್ದು, ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
ಕಡಿಮೆ ವೋಟ್ ಪಡೆದ ಕಾರಣ ಬೈಕ್ ರೇಸರ್ ಐಶ್ವರ್ಯಾ ಈ ವಾರ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಬೆಂಗಳೂರು ಮೂಲದ ಐಶ್ವರ್ಯಾ ಪಿಸೆ ಮೋಟಾರು ಕ್ರೀಡೆಗಳಲ್ಲಿ ಮಹಿಳಾ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!