ಅಜಾದಿ ಕಾ ಅಮೃತ್ ಮಹೋತ್ಸವ: ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ) ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದರು.
ಈ ವಿಶೇಷ ಸರಣಿಯ ನಾಣ್ಯಗಳಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಲೋಗೋದ ಥೀಮ್ ಅನ್ನು ಹೊಂದಿದ್ದು, ದೃಷ್ಟಿ ವಿಕಲಚೇತನರು ಕೂಡ ಕೂಡ ಇವುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
₹1, ₹2, ₹5, ₹10 ಹಾಗೂ ₹20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಅವರು ಬಿಡುಗಡೆ ಮಾಡಿದರು.
ನಾಣ್ಯ ಬಿಡುಗಡೆ ನಂತರ ಮಾತನಾಡಿದ ಪ್ರಧಾನಿಮೋದಿ, ಹೊಸ ನಾಣ್ಯಗಳು ಜನರಿಗೆ ಅಮೃತ್​ ಕಾಲವನ್ನ ನೆನಪಿಸುತ್ತವೆ. ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಲು ಜನರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ 12 ಯೋಜನೆಗಳನ್ನೊಳಗೊಂಡ ಜನ್ ಸಮರ್ಥ್ ಯೋಜನೆಗೆ ಪ್ರಧಾನಿ ಐಕಾನಿಕ್ ವೀಕ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಪ್ರತಿಯೊಂದು ಯೋಜನೆಗಳನ್ನು ಈ ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಈ ವೇಳೆ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!