Monday, October 2, 2023

Latest Posts

ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್‌ ಬಂಗಾ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್‌ ಬಂಗಾ (Ajay Banga) ಅವರು ನೇಮಕವಾಗಿದ್ದಾರೆ.
ಅವರು 5 ವರ್ಷಗಳ ಅವಧಿಗೆ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಮೇ 3ರಂದು ಬಂಗಾ ನೇಮಕವನ್ನು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ ಹಾಗೂ ವಿಶ್ವ ಬ್ಯಾಂಕ್‌ ಎರಡಕ್ಕೂ ಅಧ್ಯಕ್ಷರಾಗಿ ನೇಮಕವಾದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈ ಕುರಿತು ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಟ್ವೀಟ್‌ ಮಾಡಿದ್ದು, ನೂತನ ಅಧ್ಯಕ್ಷ ಅಜಯ್‌ ಬಂಗಾ ಅವರಿಗೆ ಸ್ವಾಗತ ಕೋರಿದೆ. ನಾವು ವಿಶ್ವವನ್ನು ಬಡತನದಿಂದ ಮುಕ್ತಿಗೊಳಿಸಲು ಹಾಗೂ ವಾಸಿಸಲು ಯೋಗ್ಯ ಗ್ರಹವಾಗಿಸಲು ಪಣ ತೊಟ್ಟಿದ್ದೇವೆ ಎಂದು ಟ್ವೀಟ್‌ ಮಾಡಿದೆ. ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಕೂಡ ಟ್ವೀಟ್‌ ಮೂಲಕ ಸ್ವಾಗತಿಸಿದ್ದಾರೆ.

ಅಜಯ್‌ ಬಂಗಾ ಅವರು (63) 1959ರಲ್ಲಿ ಪುಣೆಯಲ್ಲಿ ಜನಿಸಿದರು. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿರುವ ಅವರು, 2010-2021 ರ ಅವಧಿಯಲ್ಲಿ ಮಾಸ್ಟರ್‌ ಕಾರ್ಡ್‌ ಕಂಪನಿಯ ಸಿಇಒ ಆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!