Wednesday, December 6, 2023

Latest Posts

‘ಅಡಿದಾಸ್’ನ ಸಹೋದರ ‘ಅಜಿತ್‌ ದಾಸ್‌ʼ ನನ್ನು ಪತ್ತೆಹಚ್ಚಿದ ಆನಂದ್‌ ಮಹಿಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜನಪ್ರಿಯ ಬ್ರಾಂಡ್‌ಗಳ ಅಗ್ಗದ ಪ್ರತಿಕೃತಿಗಳು ಸಾಮಾನ್ಯವಾಗಿ ಮೋಸಗೊಳಿಸುವ ರೀತಿಯ ಹೆಸರುಗಳನ್ನು ಹೊಂದಿರುತ್ತವೆ. ಆ ಹೆಸರುಗಳು ಕೆಲವೊಮ್ಮೆ ಸಾಕಷ್ಟು ವಿನೋದವನ್ನು ನೀಡುತ್ತದೆ. ಅದರಲ್ಲೂ ಪ್ರಮುಖವಾಗಿ ಅಡಿದಾಸ್‌, ಪೂಮಾ, ನೈಕಿ, ರಿಬಾಕ್‌ ಮೊದಲಾದ ಪ್ರಖ್ಯಾತ ಬ್ರಾಂಡ್‌ ಗಳ ಸೇಮ್ ತದ್ರೂಪು ಹಾಗೂ ಹೆಸರಿನಲ್ಲಿ ಒಂದಕ್ಷರವಷ್ಟೇ ವ್ಯತ್ಯಾಸವಾಗುವ ಸಾವಿರಾರು ಚೀಪ್‌ ಬ್ರಾಂಡ್‌ ಗಳಿವೆ. ಇವುಗಳನ್ನು ಪಕ್ಕನೆ ನೋಡಿದರೆ ಒರಿಜನಲ್‌ ಬ್ರಾಂಡ್‌‌ ಗಳ ರೀತಿಯೇ ಕಾಣುತ್ತವೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಕ್ರೀಡಾ ಶೂ ಬ್ರಾಂಡ್ ಅಡಿಡಾಸ್‌ ಮಾದರಿಯಲ್ಲೇ ಬ್ರ್ಯಾಂಡಿಂಗ್ ಹೊಂದಿರುವ ಅಂತಹದ್ದೇ ಉತ್ಪನ್ನದ ಚಿತ್ರವನ್ನು ತಮಾಷೆಯ ಟ್ವೀಟ್ನೊಂದಿಗೆ ಹಂಚಿಕೊಂಡಿದ್ದಾರೆ.
‌ಆನಂದ್ ಮಹೀಂದ್ರಾ ಅಪ್‌ಲೋಡ್ ಮಾಡಿರುವ ಚಿತ್ರದಲ್ಲಿ ಲೋಗೋ ಮತ್ತು ಮೂರು-ಪಟ್ಟೆಯ ಟ್ರೇಡ್‌ಮಾರ್ಕ್‌ನೊಂದಿಗೆ ಅಡಿಡಾಸ್ ಪಾದರಕ್ಷೆಯಂತೆ ಕಾಣುವ ಬಿಳಿ ಶೂ ಒಂದಿದೆ. ಆದಾಗ್ಯೂ, ಹತ್ತಿರದಿಂದ ನೋಡಿದಾಗ, ನಕಲಿ ಶೂನಲ್ಲಿ ಅಡಿಡಾಸ್ ಹೆಸರನ್ನು “ಅಜಿತ್‌ ದಾಸ್” ಎಂದು ಬರೆದಿರುವುದನ್ನು ಗಮನಿಸಬಹುದು.

ಕೆಲವರಿಗೆ ಇದು ಅಸಂಬದ್ಧವೆಂದು ತೋರಬಹುದಾದರೂ ಆನಂದ್‌ ಮಹಿಂದ್ರಾ ಅವರಿಗೆ ಇದು ಸರಿಯಾಗಿಯೇ ಕಂಡಿದೆ. ʼಈ ಹೆಸರು ಸಂಪೂರ್ಣ ತಾರ್ಕಿಕʼ ಎಂದು ಅವರು ತಮಾಷೆ ಮಾಡಿದ್ದಾರೆ “ಅಂದರೆ ʼಆದಿʼಗೆ ʼಅಜಿತ್ʼ ಎಂಬ ಸಹೋದರನಿದ್ದಾನೆ. ನೋಡಿ ಈ ವಸುಧೈವ ಕುಟುಂಬಕಂ” ಕಲ್ಪನೆ ಎಷ್ಟು ಚೆನ್ನಾಗಿದೆ ಎಂದು ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಬಳಕೆದಾರರ ಗಮನ  ಸೆಳೆದಿದೆ. ಹಲವಾರು ಜನರು ಮೋಸಗೊಳಿಸುವ ಉತ್ಪನ್ನಗಳ ಫೋಟೋ ಹಂಚಿಕೊಂಡು ಮಹಿಂದ್ರಾ ಜೊತೆಗೆ ಸೇರಿ ನಕ್ಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!