ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್ ನಲ್ಲಿ 4 ಚಿನ್ನ ಗೆದ್ದ ಕಾಲಿವುಡ್‌ ಸೂಪರ್ ಸ್ಟಾರ್ ಅಜಿತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಾಲಿವುಡ್‌ ಚಿತ್ರರಂಗದ ಸೂಪರ್‌ ಸ್ಟಾರ್‌ ಅಜಿತ್‌ ತಾವು ತೆರೆಯ ಮೇಲಷ್ಟೇ ಹೀರೋ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.  ತಿರುಚ್ಚಿಯಲ್ಲಿ ನಡೆಯುತ್ತಿರುವ 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಿರುವ ಅಜಿತ್ ಕುಮಾರ್ ಒಟ್ಟು ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅಪರೂಪದ ಸಾಧನೆ ಮೆರೆದಿದ್ದಾರೆ.
ಚಾಂಪಿಯನ್‌ ಶಿಪ್‌ ನ ಸಿಎಫ್‌ಪಿ ಮಾಸ್ಟರ್ ಮೆನ್ ಟೀಮ್ ಈವೆಂಟ್, ಎಸ್‌ಟಿಡಿಪಿ ಮಾಸ್ಟರ್ ಮೆನ್ ಟೀಮ್ ಈವೆಂಟ್ ಮತ್ತು 50 ಮೀಟರ್ ಎಫ್‌ಪಿ ಮಾಸ್ಟರ್ ಮೆನ್ ಟೀಮ್ ಈವೆಂಟ್ ಸೇರಿದಂತೆ ಒಟ್ಟು ನಾಲ್ಕು ಟೀಮ್ ಈವೆಂಟ್‌ಗಳಲ್ಲಿ ಅಜಿತ್ ಮತ್ತು ತಂಡ ಚಿನ್ನದ ಪದಕಗಳನ್ನು ಗೆದ್ದಿದೆ. ಜುಲೈ 24 ರಂದು ಆರಂಭವಾದ ಚಾಂಪಿಯನ್‌ಶಿಪ್ ಭಾನುವಾರದವರೆಗೆ ನಡೆಯಲಿದೆ.
ನಟ ಅಜಿತ್‌ ಕುಮಾರ್‌ ತಿರುಚ್ಚಿನ ಶೂಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಪಾಲ್ಗೊಂಡಿರುವ ಚಿತ್ರಗಳು ಮತ್ತು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಜಿತ್‌ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಅವರು ಕಳೆದ ವರ್ಷ, ಚೆನ್ನೈನಲ್ಲಿ ನಡೆದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅಜಿತ್ ಪ್ರಸ್ತುತ #AK61 ಎಂದು ತಾತ್ಕಾಲಿಕ ಶೀರ್ಷಿಕೆಯ ಇರಿಸಲಾಗಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಥಾವಸ್ತುವು ಬ್ಯಾಂಕ್ ದರೋಡೆಯ ಸುತ್ತ ಸುತ್ತುತ್ತದೆ. ಪ್ರಸ್ತು ತ ಹೈದರಾಬಾದ್‌ ನಲ್ಲಿ ಈ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಆ ಬಳಿಕ ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!