ಆಗಸದತ್ತ ಮುಖಮಾಡಿದೆ ಜುಂಜುನ್‌ವಾಲಾರ ಆಕಾಶ ಏರ್‌!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಾರನ್ ಬಫೆಟ್ ಖ್ಯಾತಿಯ ರಾಕೇಶ್ ಜುಂಜುನ್‌ವಾಲಾ ಅವರ ಬೆಂಬಲದಲ್ಲಿ ಆಕಾಶ ಏರ್ ಭಾರತೀಯ ವಿಮಾನಯಾನ ಸೇವೆಗೆ ದಾಪುಗಾಲಿಡಲು ಸಂಪೂರ್ಣ ಸಿದ್ಧವಾಗಿದೆ. ಆಗಸ್ಟ್ 7 ರಂದು ಆಕಾಶ ಏರ್‌ಲೈನ್ಸ್‌ನ ಮೊದಲ ವಿಮಾನ ಹಾರಾಟ ನಡೆಸಲಿದ್ದು, ಟಿಕೆಟ್ ಮುಂಗಡ ಕಾಯ್ದಿರುವಿಕೆ ಪ್ರಾರಂಭವಾಗಿದೆ. ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ತನ್ನ ಮೊದಲ ಸೇವೆಯನ್ನು ಆರಂಭಿಸುವ ಮೂಲಕ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ತಿಳಿಸಿದೆ.

ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳು ಮತ್ತು ಆಗಸ್ಟ್ 13 ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ ಎಂದು ಆಕಾಶ ಏರ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!