CINEMA| ಎಲ್ಲಾ ಇಂಡಸ್ಟ್ರಿಗಳ ಸ್ಟಾರ್ ಹೀರೋಗಳು ಈ ಮದುವೆಯಲ್ಲಿ! ಯಾರ ಮದುವೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಸೆಲೆಬ್ರಿಟಿಗಳು ಬೇರೆ ಸೆಲೆಬ್ರಿಟಿಗಳು, ಪರಿಚಿತರು, ಅಭಿಮಾನಿಗಳ ಮದುವೆಗೆ ಹೋಗಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ. ಆದರೆ, ಈ ಮದುವೆಗೆ ನೀವು ಬಂದರೆ ಎಲ್ಲಾ ಇಂಡಸ್ಟ್ರಿಗಳ ಸ್ಟಾರ್ ಹೀರೋಗಳನ್ನು ಒಂದೇ ದಿನದಲ್ಲಿ ನೋಡಬಹುದು. ದಿ ವಾಲ್ಟ್ ಡಿಸ್ನಿ ಕಂಪನಿ ಇಂಡಿಯಾ ಮತ್ತು ಸ್ಟಾರ್ ಇಂಡಿಯಾದ ಅಧ್ಯಕ್ಷ ಕೆ.ಮಾಧವನ್ ಅವರ ಪುತ್ರನ ಮದುವೆ ರಾಜಸ್ಥಾನದ ಜೈಪುರದ ಕೋಟೆಯಲ್ಲಿ ನೆರವೇರಿತು. ಈ ಮದುವೆಗೆ ಎಲ್ಲಾ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಲಾಗಿತ್ತು. ಸಿನಿಮಾ ಮತ್ತು ಟಿವಿ ಇಂಡಸ್ಟ್ರಿಯಿಂದ ಫೇಮಸ್ ಆಗಿರುವ ಅನೇಕ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಅಕ್ಷಯ್ ಕುಮಾರ್, ಅಮೀರ್ ಖಾನ್, ಮೋಹನ್ ಲಾಲ್, ಕಮಲ್ ಹಾಸನ್, ಪೃಥ್ವಿರಾಜ್ ಸುಕುಮಾರನ್, ಕರಣ್ ಜೋಹರ್. ಅವರೆಲ್ಲರೂ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ್ದರು. ಒಂದೇ ಮದುವೆಯಲ್ಲಿ ಹಲವು ಸ್ಟಾರ್ ಹೀರೋಗಳು ಕಾಣಿಸಿಕೊಂಡಿರುವ ಈ ಫೋಟೋಗಳು ವೈರಲ್ ಆಗಿವೆ.

ಈ ಮದುವೆಯಲ್ಲಿ ಸೆಲೆಬ್ರಿಟಿಗಳೂ ಡ್ಯಾನ್ಸ್ ಮಾಡಿದ್ದಾರೆ. ಮೋಹನ್ ಲಾಲ್ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ಪಂಜಾಬಿ ನೃತ್ಯ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಈ ಡ್ಯಾನ್ಸ್ ವಿಡಿಯೋವನ್ನು ಅಕ್ಷಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಮೋಹನ್‌ಲಾಲ್ ಸರ್ ಜೊತೆಗಿನ ಡ್ಯಾನ್ಸ್ ಅವಿಸ್ಮರಣೀಯ. ಈ ಕ್ಷಣವನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!