`ನಾನು ಕೆನಡಾದ ಪೌರತ್ವವನ್ನು ತ್ಯಜಿಸುತ್ತೇನೆ, ನನ್ನ ಬಗ್ಗೆ ತಿಳಿಯದೆ ಟೀಕಿಸಿದ್ದಾರೆ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮ ದೇಶದ ಅನೇಕ ಸೆಲೆಬ್ರಿಟಿಗಳು ಮತ್ತು ಕೆಲವು ಸಾಮಾನ್ಯ ಜನರು ಸಹ ಬೇರೆ/ಬೇರೆ ದೇಶದ ಪೌರತ್ವವನ್ನು ಹೊಂದಿದ್ದಾರೆ. ಮತ್ತು ಇಲ್ಲಿಂದ ಬೇರೆ ದೇಶಗಳಿಗೆ ಹೋಗಿ ನೆಲೆಸುವ ಅನೇಕರು ಬೇರೆ ದೇಶಗಳ ಪೌರತ್ವವನ್ನೂ ತೆಗೆದುಕೊಳ್ಳುತ್ತಾರೆ. ಇದೀಗ ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಕೆನಡಾದ ಪೌರತ್ವದ ವಿಚಾರ ಸುದ್ದಿಯಲ್ಲಿದೆ. ಭಾರತದಲ್ಲಿದ್ದು, ಇಲ್ಲಿ ಸಂಪಾದಿಸಿ, ಇಲ್ಲಿಯೇ ಆಸ್ತಿಪ-ಪಾಸ್ತಿ ಮಾಡಿ ಕೆನಡಾ ಪೌರತ್ವ ಯಾಕೆ ಎಂದು ಹಲವರು ಪ್ರಶ್ನಿಸಿದ್ದರು. ಈ ಹಿಂದೆಯೂ ಅಕ್ಷಯ್ ಈ ವಿಚಾರದಲ್ಲಿ ಹಲವು ಬಾರಿ ಟೀಕೆಗೆ ಒಳಗಾಗಿದ್ದರು.

ಅಕ್ಷಯ್ ಸದ್ಯ ಸೆಲ್ಫಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಚಾರಗಳ ಭಾಗವಾಗಿ ಪ್ರಮುಖ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಕೆನಡಾದ ಪೌರತ್ವದ ಬಗ್ಗೆ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ಹೇಳಿದ್ದು.. ʻಒಂದು ಕಾಲದಲ್ಲಿ ನನ್ನ ಎಲ್ಲಾ ಚಿತ್ರಗಳು ಫ್ಲಾಪ್ ಆಗಿ ಇಲ್ಲಿದ್ದು ನಾನೇನೂ ಮಾಡಬಯಸಿರಲಿಲ್ಲ. ಆಗ ಕೆನಡಾದಲ್ಲಿದ್ದ ನನ್ನ ಸ್ನೇಹಿತ ಅಲ್ಲಿಯೇ ನನಗೆ ಕೆಲಸ ಕೊಡಿಸಿದರು. ನಾನು ಹೊರಟೆ ಅದರ ನಂತರ ನಾನು ಅಲ್ಲಿನ ಪೌರತ್ವವನ್ನು ತೆಗೆದುಕೊಂಡೆ. ಆದರೆ ನನ್ನ ಬಳಿ ಬಿಡುಗಡೆಯಾಗಬೇಕಿದ್ದ ಎರಡು ಚಿತ್ರಗಳು ಇದ್ದವು. ನಾನು ಕೆನಡಾಕ್ಕೆ ಹೋದ ನಂತರ ಆ ಚಿತ್ರಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದಕ್ಕೆ ಅನೇಕರು ಇಲ್ಲಿಗೆ ಬಂದು ಸಿನಿಮಾ ಮಾಡುವಂತೆ ಕೇಳಿಕೊಂಡರು. ನನ್ನ ಕೆನಡಾದ ಗೆಳೆಯನೂ ಇಲ್ಲಿಗೆ ಹೋಗು ಎಂದು ತಿಳಿಹೇಳಿದ್ದಕ್ಕೆ ನಾನು ಭಾರತಕ್ಕೆ ವಾಪಸ್‌ ಬಂದು ಸಿನಿಮಾ ಮಾಡಲು ಶುರು ಮಾಡಿದೆʼ.

ಇಲ್ಲಿಗೆ ಬಂದ ನಂತರ ನನ್ನ ಕೆಲಸ ಮತ್ತು ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ. ನಾನು ಕೆನಡಾದ ಪೌರತ್ವವನ್ನು ಹೊಂದಿರುವ ಬಗ್ಗೆಯೂ ನನಗೆ ನೆನಪಿಲ್ಲ. ಆ ಪಾಸ್ ಪೋರ್ಟ್ ಕೂಡ ಎಲ್ಲಿಯೂ ಸಿಗಲಿಲ್ಲ. ಆದರೆ ಇದನ್ನು ತಿಳಿಯದೆ ಕೆಲವರು ನನ್ನನ್ನು ಟೀಕಿಸಿದರು. ನಾನು ಯಾಕೆ ಕೆನಡಾಕ್ಕೆ ಹೋದೆ ಮತ್ತು ನನ್ನ ಬಗ್ಗೆ  ಸತ್ಯ ತಿಳಿಯದೆ ಟೀಕಿಸಿದ್ದಾರೆ. ಭಾರತವೇ ನನಗೆ ಸರ್ವಸ್ವ. ನಾನು ಇಲ್ಲಿ ಗಳಿಸಿದ್ದನ್ನು ಇಲ್ಲಿಗೆ ಹಿಂತಿರುಗಿಸುತ್ತೇನೆ. ಕೆಲವು ತಿಂಗಳ ಹಿಂದೆಯೇ ನಾನು ನನ್ನ ಕೆನಡಾದ ಪೌರತ್ವವನ್ನು ತ್ಯಜಿಸಲು ಅರ್ಜಿ ಸಲ್ಲಿಸಿದ್ದೇನೆಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!