ಜೂ.12ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಹೊಸದಿಗಂತ ವರದಿ ಹುಬ್ಬಳ್ಳಿ
ಹಿಂದೂ ಜನಜಾಗೃತಿ ಸಮಿತಿವತಿಯಿಂದ ಜೂನ್ 12 ರಿಂದ 18 ರವರಗೆ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಈ ಅಧಿವೇಶನವನ್ನು ಕಳೆದ‌ 10 ವರ್ಷದಿಂದ ಮಾಡಲಾಗುತ್ತಿದ್ದು, ಈ ವರ್ಷದ ಅಧಿವೇಶನದಲ್ಲಿ ದೇಶದ 26 ರಾಜ್ಯದ ಮತ್ತು ಅಮೇರಿಕ, ಇಂಗ್ಲೆಡ್, ಹಾಂಗ್ ಕಾಂಗ್, ಸಿಂಗಾಪುರ ಮತ್ತು ನೇಪಾಲ ಸೇರಿದಂತೆ 350 ಕ್ಕೂ ಹೆಚ್ಚು ಹಿಂದೂ ಸಂಘಟನೆಯ 1000 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಮೋಹನ‌ ಗೌಡ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಅಧಿವೇಶನದಲ್ಲಿ ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾ ಮುಕ್ತಿ ಆಂದೋಲನ, ಪ್ಲೆಸಸ್ ಆಫ್ ವರ್ಶಿಪ್ ಆ್ಯಕ್ಟ್, ಕಾಶ್ಮಿರಿ ಹಿಂದೂಗಳ ನರಮೇಧ, ಮಸೀದಿಯಲ್ಲಿ ಧ್ವನಿ ವರ್ಧಕ ಬಳಕೆಯಿಂದ ಆಗುವ ಶಬ್ಧ ಮಾಲಿನ್ಯ, ಹಿಜಾಬ್ ಆಂದೋಲನ, ಹಲಾಲ್ ಸರ್ಟಿಫಿಕೇಟ್ ಆರ್ಥಿಕ್, ಹಿಂದೂ ಸಂರಕ್ಷಣೆ, ಮಂದಿರ ಸಂಸ್ಕೃತಿ ಇತಿಹಾಸ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ ಎಂದರು.

ಇನ್ನೂ‌ ಅಧಿವೇಶನದಲ್ಲಿ ಸಿಬಿಐನ ಮಾಜಿ ನಿರ್ದೇಶಕ ನಾಗೇಶ್ವರ ರಾವ್ , ಹರಿಶಂಕರ ಜೈನ್, ನ್ಯಾಯಾವಾದಿ ವಿಷ್ಣು ಶಂಕರ ಜೈನ್, ಭಾಗ್ಯನಗರದ ಶಾಸಕ ಟಿ. ರಾಜಸಿಂಹ, ಯುವ ಬ್ರಿಗೇಡ್ ನ ಚಕ್ರವರ್ತಿ ಸುಲಿಬೆಲಿ, ರಾಹುಲ್ ಕೌಲ್, ನಿಲ ಮಾಧವ ದಾಸ ಸೇರಿದಂತೆ ಅನೇಕ ಚಿಂತಕರು‌ ಆಗಮಿಸಲಿದ್ದು ಹಿಂದೂ ಧರ್ಮದ ಜಾಗೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!