ಮುಲಾಯಂ ಸಿಂಗ್‌ ಯಾದವ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಅಖಿಲೇಶ್‌ ಯಾದವ್‌ ಪತ್ನಿ ಡಿಂಪಲ್ ಯಾದವ್‌ ಸ್ಪರ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾದ ಮೈನ್‌ಪುರಿ ಸಂಸದೀಯ ಸ್ಥಾನಕ್ಕೆ ಸಮಾಜವಾದಿ ಪಕ್ಷವು ತನ್ನ ಅಭ್ಯರ್ಥಿಯಾಗಿ ಡಿಂಪಲ್ ಯಾದವ್ ಹೆಸರನ್ನು ಗುರುವಾರ ಪ್ರಕಟಿಸಿದೆ.‌

ಈ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.

ಡಿಂಪಲ್ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸೊಸೆಯಾಗಿದ್ದಾರೆ.

“ಪಕ್ಷವು ಡಿಂಪಲ್ ಯಾದವ್ ಅವರನ್ನು ಮೈನ್‌ಪುರಿ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಎಂದು ಘೋಷಿಸುತ್ತದೆ” ಎಂದು ಸಮಾಜವಾದಿ ಪಕ್ಷವು ಟ್ವೀಟ್‌ನಲ್ಲಿ ತಿಳಿಸಿದೆ.

ದೀರ್ಘಕಾಲದ ಅನಾರೋಗ್ಯದ ನಂತರ ಕಳೆದ ತಿಂಗಳು ನಿಧನರಾದ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು 2019 ರಲ್ಲಿ ಮಣಿಪುರಿ ಕ್ಷೇತ್ರವನ್ನು ಕೇವಲ 94,000 ಮತಗಳ ಅಂತರದಿಂದ ಗೆದ್ದಿದ್ದರು.

ಮೈನ್‌ಪುರಿ ಯಾವಾಗಲೂ ಸಮಾಜವಾದಿ ಪಕ್ದ ಭದ್ರಕೋಟೆಯಾಗಿದೆ. ಇಲ್ಲಿಂದಲೇ ಮುಲಾಯಂ ಅವರು 1996 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು 2004, 2009 ಮತ್ತು 2019ರಲ್ಲಿ ಒಟ್ಟೂ ಮೂರು ಬಾರಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!