Thursday, June 30, 2022

Latest Posts

ಅಕ್ಷರ್ ಪಟೇಲ್​ ಮಾಂತ್ರಿಕ ಬೌಲಿಂಗ್ ದಾಳಿಗೆ ಮಂಕಾದ ನ್ಯೂಜಿಲ್ಯಾಂಡ್​: 296 ರನ್ ಗೆ ಆಲೌಟ್

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಅಕ್ಷರ್ ಪಟೇಲ್​ ಮಾಂತ್ರಿಕ ಬೌಲಿಂಗ್ ದಾಳಿಗೆ ನ್ಯೂಜಿಲ್ಯಾಂಡ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ಗಳಿಗೆ ಸರ್ವಪತನಗೊಂಡಿದೆ. ಈ ಮೂಲಕ ಭಾರತ 49 ರನ್​ಗಳಿಂದ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದೆ.
ಎರಡನೇ ದಿನ ವಿಕೆಟ್​ ನಷ್ಟವಿಲ್ಲದೆ 129 ರನ್​ಗಳಿಸಿದ್ದ ಕಿವೀಸ್ ಆರಂಭಿಕ ಜೋಡಿಯನ್ನು ಅಶ್ವಿನ್​ ಬ್ರೇಕ್​ ಮಾಡಿದರು. ಅವರು 214 ಎಸೆತಗಳಲ್ಲಿ 89 ರನ್​ಗಳಿಸಿದ್ದ ವಿಲ್ ಯಂಗ್​ ವಿಕೆಟ್​ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.​ನಂತರ 64 ಎಸೆತಗಳಲ್ಲಿ 18 ರನ್​ಗಳಿಸಿದ್ದ ವಿಲಿಯಮ್ಸನ್​ರನ್ನು ಉಮೇಶ್​ ಯಾದವ್​ ಎಲ್​ಬಿ ಡಬ್ಲ್ಯೂ ಬಲೆಗೆ ಬೀಳಿಸಿ ಕಿವೀಸ್​ಗೆ ಆಘಾತ ನೀಡಿದರು.
197ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ನ್ಯೂಜಿಲ್ಯಾಂಡ್​ ತಂಡ ಅಕ್ಷರ್ ಪಟೇಲ್ ಮತ್ತು ಅಶ್ವಿನ್​ ದಾಳಿಗೆ ಸಿಲುಕಿ ಮುಂದಿನ 99 ರನ್​ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಟಾಮ್ ಲೇಥಮ್​ 282 ಎಸೆತಗಳಲ್ಲಿ 10 ಬೌಂಡರಿ ಸಹಿತ 95 ರನ್​ಗಳಿಸಿದರು. ಉಳಿದಂತೆ ಹಿರಿಯ ಬ್ಯಾಟರ್​ ರಾಸ್​ ಟೇಲರ್​ 11, ಹೆನ್ರಿ ನಿಕೋಲ್ಸ್​ 2, ಟಾಮ್ ಬ್ಲಂಡೆಲ್ 13, ರಚಿನ್ ರವೀಂದ್ರ 13, ಕೈಲ್ ಜೇಮಿಸನ್ 23, ಟಿಮ್ ಸೌಥಿ 5, ವಿಲ್​ ಸಮರ್​ವಿಲ್​ 6 ರನ್​ಗಳಿಸಿ ಔಟಾದರು.
ಅಕ್ಷರ್​ ಪಟೇಲ್ 62ಕ್ಕೆ 5, ರವಿಚಂದ್ರನ್ ಅಶ್ವಿನ್​ 82ಕ್ಕೆ 3, ರವೀಂದ್ರ ಜಡೇಜಾ 57ಕ್ಕೆ 1 ಮತ್ತು ಉಮೇಶ್ ಯಾದವ್​ 50ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
49 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಭಾರತ 3ನೇ ದಿನದಾಟದಂತ್ಯಕ್ಕೆ ಭಾರತ ತಂಡ 4 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 10 ರನ್​ಗಳಿಸಿದೆ.
ಅಕ್ಷರ್​ ಪಟೇಲ್ 5 ವಿಕೆಟ್ ಸಾಧನೆ:
ಇದೇ ವರ್ಷ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು ಮೊದಲ ಪಂದ್ಯದಲ್ಲೇ 7 ವಿಕೆಟ್​ ಪಡೆದು ಮಿಂಚಿದ್ದರು. ನಂತರ ಉಳಿದ ಮೂರು ಪಂದ್ಯಗಳಲ್ಲೂ ಒಟ್ಟು 4 ಬಾರಿ 5 ವಿಕೆಟ್​ ಸಾಧನೆ ಮಾಡಿದ್ದರು. ಇದೀಗ ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲೂ ಐವರು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಆರಂಭದ 4 ಟೆಸ್ಟ್​ ಪಂದ್ಯಗಳಲ್ಲಿ ಗರಿಷ್ಠ ಬಾರಿ 5 ವಿಕೆಟ್​ ಪಡೆದ ದಾಖಲೆಯನ್ನು ಇಂಗ್ಲೆಂಡ್​ನ ​ಟಾಮ್​ ರಿಚರ್ಡ್ಸನ್​ ಮತ್ತು ಆಸ್ಟ್ರೇಲಿಯಾದ ರಾಡ್ನಿ ಹಾಗ್​ ಜೊತೆಗೆ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss