ಹೇರಾ ಫೇರಿ 3 ಸಿನಿಮಾದಲ್ಲಿ ಅಕ್ಷಯ ಕುಮಾರ್ ಗಿಲ್ಲ ಚಾನ್ಸ್: ಈತ ಮಾಡ್ತಾನೆ ಆಕ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ಕಂಡ ಹಿಟ್ ಸಿನಿಮಾಗಳಲ್ಲಿ ಒಂದು ಹೇರಾ ಫೇರಿ. ಅಕ್ಷಯ ಕುಮಾರ್ ನಟಿಸಿ ಅಭಿಮಾನಿಗಳನ್ನು ಸೆಳೆದಿದ್ದರು.

ಇದೀಗ ‘ಹೇರಾ ಫೆರಿ’ಯ ಮೂರನೇ ಭಾಗ ಬರಲಿದ್ದು, ಆದರೆ ಇಲ್ಲಿ ಅಕ್ಷಯ ಬದಲು ಕಾರ್ತಿಕ್ ಆರ್ಯನ್ ಸೇರಲಿದ್ದಾರೆ .

ಶುಕ್ರವಾರ ಹಿರಿಯ ನಟ ಪರೇಶ್ ರಾವಲ್, ಕಾರ್ತಿಕ್ ಆರ್ಯನ್​​​ ‘ಹೇರಾ ಫೇರಿ’ ತಾರಾಗಣಕ್ಕೆ ಹೊಸ ಸೇರ್ಪಡೆ ಎಂದು ಖಚಿತಪಡಿಸಿದ್ದಾರೆ. ಇದರಿಂದ
ನಂತರ ಹೇರಾ ಫೇರಿ ಚಿತ್ರದ ಮೊದಲೆರಡು ಭಾಗಗಳಲ್ಲಿ ನಟಿಸಿರುವ ಅಕ್ಷಯ್ ಕುಮಾರ್ ಅವರ ಅಭಿಮಾನಿಗಳು ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಿಯದರ್ಶನ್ ನಿರ್ದೇಶನದ ‘ಹೇರಾ ಫೇರಿ’ 2000ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

2006ರಲ್ಲಿ ಬಂದ ಎರಡನೇ ಭಾಗವನ್ನು ದಿವಂಗತ ನೀರಜ್ ವೋರಾ ನಿರ್ದೇಶಿಸಿದ್ದು, ಇದರಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್, ಸುನೀಲ್ ಶೆಟ್ಟಿ, ಬಿಪಾಶಾ ಬಸು, ರಾಜ್‌ಪಾಲ್ ಯಾದವ್ ಮತ್ತು ರಿಮಿ ಸೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಮೂನೇ ಭಾಗಕ್ಕೆ ಕಾರ್ತಿಕ್​ ಆರ್ಯನ್​ ಹೊಸ ಸೇರ್ಪಡೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!