Thursday, August 11, 2022

Latest Posts

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಅವರನ್ನು ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಅಕ್ಷಯ್ ಶೂಟಿಂಗ್‌ಗಾಗಿ ಇಂಗ್ಲೆಂಡ್‌ಗೆ ತೆರಳಿದ್ದರು. ತಾಯಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದಂತೆ ಶೂಟಿಂಗ್ ಬಿಟ್ಟು ಅಕ್ಷಯ್ ಭಾರತಕ್ಕೆ ವಾಪಸಾಗಿದ್ದಾರೆ. ಇಂದು ಬೆಳಗ್ಗೆ ಅಕ್ಷಯ್ ತಾಯಿ ಕೊನೆಯುಸಿರೆಳೆದಿದ್ದು, ಅಕ್ಷಯ್ ನೋವನ್ನು ಬರಹಕ್ಕಿಳಿಸಿದ್ದಾರೆ.
ನನ್ನಾತ್ಮ ಅಮ್ಮನೇ ಆಗಿದ್ದರು. ಇಂದು ತಡೆದುಕೊಳ್ಳಲಾರದಷ್ಟು ನೋವಾಗುತ್ತಿದೆ. ನನ್ನಮ್ಮ ಶ್ರೀಮತಿ ಅರುಣಾ ಭಾಟಿಯಾ ಇಂದು ಜಗತ್ತನ್ನು ಬಿಟ್ಟು ತೆರಳಿದ್ದಾರೆ. ಇನ್ನೊಂದು ಜಗತ್ತಿನಲ್ಲಿರುವ ನನ್ನ ತಂದೆಯನ್ನು ಅವರು ಸೇರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸಾಂತ್ವನ ಕೋರಿದ ಎಲ್ಲರಿಗೂ ಧನ್ಯವಾದ ಓಂ ಶಾಂತಿ ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss