BOLLYWOOD| ʻಮಾತು ತಪ್ಪೋದಿಲ್ಲʼ-ಪಾನ್ ಮಸಾಲಾ ಜಾಹೀರಾತಿಗೆ ನಟ ಅಕ್ಷಯ್ ಕೌಂಟರ್ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅಕ್ಷಯ್ ಕುಮಾರ್..ಈ ಹಿಂದೆ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿ ಪ್ರೇಕ್ಷಕರಿಂದ ತೀವ್ರ ಟೀಕೆ ಎದುರಿಸಿದ್ದರು. ಕೂಡಲೇ ಎಚ್ಚೆತ್ತು “ನಾನು ಆ ಜಾಹೀರಾತಿನಿಂದ ಹಿಂದೆ ಸರಿಯುತ್ತಿದ್ದೇನೆ. ಇನ್ಮುಂದೆ ಇಂತಹ ಜಾಹೀರಾತುಗಳಲ್ಲಿ ನಟಿಸುವುದಿಲ್ಲ” ಎಂಬ ಭರವಸೆಯನ್ನೂ ನೀಡಿದ್ದರು. ಇದೀಗ ಮತ್ತೆ ಪಾನ್ ಮಸಾಲಾ ಜಾಹೀರಾತು ಬಿಡುಗಡೆಯಾಗಿದ್ದು, ಇದರಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಈ ಹಿಂದೆ ಇಂತಹ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಹೇಳಿ ಈಗ ಮತ್ತದೇ ಕೆಲಸ ಮಾಡಿರುವ ಅಕ್ಷಯ್ ಮಾತು ಉಳಿಸಿಕೊಂಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಅಕ್ಷಯ್ ತೀವ್ರವಾಗಿ ಟ್ರೋಲ್ ಆಗಿದ್ದರು.

ಈ ಟ್ವೀಟ್‌ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದು, “ಸತ್ಯವನ್ನು ಅರಿತು ಮಾತನಾಡಿ, ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಈ ಜಾಹೀರಾತನ್ನು ಅಕ್ಟೋಬರ್ 13, 2021 ರಂದು ಚಿತ್ರೀಕರಿಸಲಾಗಿದೆ. ನಾನು ಇಂತಹ ಜಾಹೀರಾತುಗಳನ್ನು ಮಾಡುವುದಿಲ್ಲ ಎಂದು ಹೇಳಿದ ನಂತರ ನಾನು ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಬ್ರ್ಯಾಂಡ್ ಈಗಾಗಲೇ ಚಿತ್ರೀಕರಿಸಿದ ಜಾಹೀರಾತನ್ನು ಕಾನೂನುಬದ್ಧವಾಗಿ ನಡೆಸುತ್ತಿದೆ. ಮುಂದಿನ ತಿಂಗಳ ಅಂತ್ಯದವರೆಗೆ ಆ ಜಾಹೀರಾತನ್ನು ಪ್ರದರ್ಶಿಸಲು ಅವರಿಗೆ ಅವಕಾಶವಿದೆ, ಹಾಗಾಗಿ ಅದನ್ನು ಪ್ರದರ್ಶಿಸುತ್ತಿದ್ದಾರೆ”ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಮೂಲಕ ಪಾನ್ ಮಸಾಲಾ ಜಾಹೀರಾತು ಬಗ್ಗೆ ಇದ್ದ ಊಹಾ-ಪೋಹಗಳ ಸುದ್ದಿಗೆ ಕಡಿವಾಣ ಬಿದ್ದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!