ಮಂಡ್ಯ ಯುವತಿಗೆ ಅಲ್ ಖೈದಾ ಬೆಂಬಲ ಅಂತರಾಷ್ಟ್ರೀಯ ಷಡ್ಯಂತ್ರದ ಭಾಗ: ಶಾಸಕ ಕಾಮತ್

ಹೊಸದಿಗಂತ ವರದಿ, ಮಂಗಳೂರು
ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮಂಡ್ಯ ಹುಡುಗಿಗೆ ಅಲ್ ಖೈದಾ ಉಗ್ರ ಸಂಘಟನೆ ಬೆಂಬಲ ನೀಡಿರುವ‌ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಅಡಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ. ‌‌‌
ಹಿಜಾಬ್ ವಿವಾದದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಹುಡುಗಿಗೆ ಅಲ್ ಖೈದಾ ನಾಯಕ ಅಲ್-ಜವಾಹಿರಿ ಬೆಂಬಲ‌ ನೀಡುವ‌ ಕುರಿತು ಹೇಳಿಕೆ ನೀಡಿದ್ದಾನೆ. ಇದರ ಸುತ್ತ ಅನುಮಾನ ಹೊಗೆಯಾಡುತಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇನೆ. ‌‌ಈಗಾಗಲೇ ಈ ವಿವಾದದಿಂದ ಶಿವಮೊಗ್ಗದಲ್ಲಿ ಬಜರಂಗದಳ‌ ಕಾರ್ಯಕರ್ತನ ಹತ್ಯೆಯೂ ನಡೆದಿದೆ. ಈ ಎಲ್ಲಾ‌ ವಿದ್ಯಾಮಾನಗಳ ಹಿಂದೆ ಉಗ್ರ ಸಂಘಟನೆಗಳ ಕುಮ್ಮಕ್ಕು ಇರಬಹುದು. ಹಾಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!