ಹೊಸದಿಗಂತ ಆನ್ಲೈನ್ ಡೆಸ್ಕ್:
ಸಾಮಾನ್ಯವಾಗಿ ಹೀರೋಗಳ ಕಟೌಟ್ಗೆ ಹಾಲಿನ ಅಭಿಷೇಕ, ಹೂವಿನ ಹಾರ, ಪಟಾಕಿ ಸಂಭ್ರಮದ ಬಗ್ಗೆ ಕೇಳಿದ್ದೀರಾ, ನೋಡಿದ್ದೀರಾ, ಆದರೆ ಮದ್ಯಾಭಿಷೇಕ?
ಹೌದು, ಇಂದು ರಾಜ್ಯಾದ್ಯಂತ ರಾಬರ್ಟ್ ಸಿನಿಮಾ ತೆರೆಕಂಡಿದ್ದು, ದರ್ಶನ್ ಅವರ ಕಟೌಟ್ಗೆ ಮದ್ಯದ ಅಭಿಷೇಕ ಮಾಡಲಾಗಿದೆ.
ತಿಪಟೂರಿನಲ್ಲಿ ಅಭಿಮಾನಿಗಳು ಅತಿರೇಕ ತೋರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತ್ರಿಮೂರ್ತಿ ಚಿತ್ರಮಂದಿರದ ಬಳಿ ದರ್ಶನ್ ಕಟೌಟ್ ನಿಲ್ಲಿಸಿದ್ದು, ಅದಕ್ಕೆ ಮದ್ಯದ ಅಭಿಷೇಕ ಮಾಡಿದ್ದಾರೆ. ಅಲ್ಲದೇ ತಾವೂ ಕಂಠಪೂರ್ತಿ ಕುಡಿದು, ಕುಣಿದು ಕುಪ್ಪಳಿಸಿದ್ದಾರೆ. ಸುಮ್ಮನೆ ಬಂದು ಸಿನಿಮಾ ನೋಡಿ ಹೋಗುವ ಮಾಮೂಲಿ ಸಾರ್ವಜನಿಕರಿಗೆ ಇದರಿಂದಾಗಿ ಮುಜುಗರ ಆಗಿದೆ.