ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಾಷ್ಟ್ರೀಯ ಬ್ಯಾಂಕ್ ಒಕ್ಕೂಟಗಳು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಮಾ.15 ಮತ್ತು 16ರಂದು ಮುಷ್ಕರಕ್ಕೆ ಕರೆ ನೀಡಿವೆ.
ಮುಷ್ಕರ ನಡೆಯುವ ದಿನಗಳು ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಯಾವುದೇ ಬ್ಯಾಂಕ್ ಸೇವೆಗಳು ಲಭ್ಯ ಇರೋದಿಲ್ಲ ಎಂದು ಕೆನರಾ ಬ್ಯಾಂಕ್ ರೆಗ್ಯೂಲೇಟ್ರಿ ಫೈಲಿಂಗ್ನಲ್ಲಿ ಮಾಹಿತಿ ನೀಡಿದೆ.
ಮುಷ್ಕರ ನಡೆಯುವ ದಿನಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮುಷ್ಕರ ಕಾರ್ಯ ರೂಪಕ್ಕೆ ಬಂದರೆ ಶಾಖೆಗಳಲ್ಲಿ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.