Tuesday, August 9, 2022

Latest Posts

ಗಮನಿಸಿ….ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ

ಹೊಸದಿಗಂತ ವರದಿ, ಶಿವಮೊಗ್ಗ:

ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆ ನಡೆಯಲಿರುವುದರಿಂದ, ಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಶಿವಮೊಗ್ಗ ನಗರಕ್ಕೆ ಬರುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಕೈಗೊಳ್ಳಲು ಕೋರಿದೆ.

1)ಭದ್ರಾವತಿ ಕಡೆಯಿಂದ ಬರುವ ವಾಹನಗಳಿಗೆ
ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ

2)ತೀರ್ಥಹಳ್ಳಿಯ ಕಡೆಯಿಂದ ಬರುವ ವಾಹನಗಳಿಗೆ
ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ

3)ಸಾಗರದ ಕಡೆಯಿಂದ ಬರುವ ವಾಹನಗಳಿಗೆ
ಆಲ್ಕೊಳ ಸರ್ಕಲ್ – ಗೋಪಾಳ – ಇಲಿಯಾಜ್ ನಗರ – ಬುದ್ದಾ ನಗರ

4)ಶಿಕಾರಿಪುರದ ಕಡೆಯಿಂದ ಬರುವ ವಾಹನಗಳಿಗೆ
ಉಷಾ ನರ್ಸಿಂಗ್ ಹೋಂ ವೃತ್ತ – ವಿನೋಬನಗರ ಪೊಲೀಸ್ ಚೌಕಿ – ಆಲ್ಕೊಳ ವೃತ್ತ – ಗೋಪಾಳ – ಇಲಿಯಾಜ್ ನಗರ – ಬುದ್ದಾ ನಗರ

5)ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳಿಗೆ
ವಿದ್ಯಾನಗರ – ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ

6)ಹೊನ್ನಾಳಿ ಕಡೆಯಿಂದ ಬರುವ ವಾಹನಗಳಿಗೆ
ಶಂಕರಮಠ ವೃತ್ತ – ವಿದ್ಯಾನಗರ – ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss