ತಪ್ಪಿತು ಮತ್ತೊಂದು ಅನಾಹುತ: ಚೆನ್ನೈ ಎಕ್ಸ್‌ಪ್ರೆಸ್ ಕೋಚ್‌ನಲ್ಲಿ ಬಿರುಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನ ಸೆಂಗೋಟ್ಟೈ ರೈಲು ನಿಲ್ದಾಣದಲ್ಲಿ ಕೊಲ್ಲಂ ಜಂಕ್ಷನ್-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ನ ಕೋಚ್‌ನ ಚಾಸಿಸ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ರೈಲ್ವೆ ಸಿಬ್ಬಂದಿ ಪತ್ತೆ ಹಚ್ಚು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಂಜೆ ರೈಲಿನ ಕೋಚ್‌ನಲ್ಲಿ ಬಿರುಕು ಪತ್ತೆಯಾಗಿದೆ. ಪರಿಣಾಮ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಯಿತು ಮತ್ತು ಮಧುರೈನಲ್ಲಿ ರೈಲಿಗೆ ಬದಲಿ ಕೋಚ್ ಅನ್ನು ಸೇರಿಸಲಾಯಿತು.

“ರೈಲು ಪುನಲೂರು ಅರಣ್ಯ ವಿಭಾಗವನ್ನು ದಾಟುವಾಗ ಕೊಲ್ಲಂನಿಂದ ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (16102) ಚಕ್ರದ ಮೇಲಿರುವ ಕೋಚ್‌ನ ಬುಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದನ್ನು ರೈಲ್ವೆ ಸಿಬ್ಬಂದಿ ಗಮನಿಸಿದ್ದು ದೊಡ್ಡ ದುರಂತವನ್ನು ತಪ್ಪಿಸಿದೆ” ಎಂದು ದಕ್ಷಿಣ ರೈಲ್ವೇ ಸಿಪಿಆರ್‌ಒ ಬಿ ಗುಗನೇಸನ್ ಹೇಳಿದ್ದಾರೆ.

ಬಿರುಕು ಪತ್ತೆ ಮಾಡಿದ ಸಿಬ್ಬಂದಿಯನ್ನು ಜಾಗೃತ ನಿಗಾ ವಹಿಸಿದ್ದಕ್ಕಾಗಿ ಶ್ಲಾಘಿಸಲಾಗುವುದು ಮತ್ತು ಇಂದಿನ ಸುರಕ್ಷತಾ ಸಭೆಯಲ್ಲಿ ಮಧುರೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಪ್ರಶಸ್ತಿಯನ್ನು ನೀಡಲಾಗುವುದು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!