ಡಾಬಾ ಗಲಾಟೆಯಲ್ಲಿ ಗಾಯಗೊಂಡಿದ್ದ ಗಾಯಕ ಅಲ್ಪಾಜ್ ಸಿಂಗ್‌ ಸ್ಥಿತಿ ಗಂಭೀರ: ಮಾಹಿತಿ ನೀಡಿದ ಗೆಳೆಯ ಹನಿಸಿಂಗ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಡಾಬಾವೊಂದರಲ್ಲಿ ನಡೆದ ಗಲಾಟೆ ವೇಳೆ ಗಾಯಗೊಂಡಿದ್ದ ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್ಜೋತ್ ಸಿಂಗ್ ಪನ್ವಾರ್ ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗೆಳೆಯನ ಆರೋಗ್ಯ ಸ್ಥಿತಿ ವಿಚಾರಿಸಲು‌ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ್ದ ಖ್ಯಾತ ಸಿಂಗರ್‌ ಹನಿಸಿಂಗ್ ʼಅಲ್ಫಾಜ್ ಸ್ಥಿತಿ ಇನ್ನೂ ಗಂಭೀರವಾಗಿದೆ ಮತ್ತು ಅವರು ಐಸಿಯುನಲ್ಲಿದ್ದಾರೆʼ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.
ಯಾರ್ ಬತೇರೆ.. ಮೊದಲಾದ ಹಿಟ್‌ ಗೀತೆಗಳಿಂದ ಪ್ರಖ್ಯಾತಿ ಗಳಿಸಿರುವ ಅಲ್ಫಾಜ್‌ ಅಕಾ ತನ್ನ ಮೂವರು ಸ್ನೇಹಿತರ ಜೊತೆಗೆ ಡಾಬಾ ಒಂದಕ್ಕೆ ಊಟಕ್ಕೆ ಹೋಗಿದ್ದರು. ಈ ವೇಳೆ ಅಕಾ ಪರಿಚಿತ ವಿಕ್ಕಿ ಎಂಬಾತ ಹಾಗೂ ಡಾಬಾ ಮಾಲೀಕ ನ ನಡುವೆ ವಾಗ್ವಾದ ನಡೆದಿದೆ. ವರದಿಯ ಪ್ರಕಾರ, ಅಲ್ಫಾಜ್ ಮಧ್ಯಸ್ಥಿಕೆ ವಹಿಸಲು ಮತ್ತು ಧಾಬಾ ಮಾಲೀಕನ ಬಳಿ ತನ್ನ ಬಾಕಿಯನ್ನು ಇತ್ಯರ್ಥಪಡಿಸುವಂತೆ ವಿಕ್ಕಿ ವಿನಂತಿಸಿದ್ದಾರೆ. ಗಾಯಕ ಮಧ್ಯಪ್ರವೇಶಿಸಲು ನಿರಾಕರಿಸಿದ್ದಾರೆ. ಈ ವೇಳೆ ವಿಕ್ಕಿ ಮಾಲೀಕನ ಟೆಂಪೋದೊಂದಿಗೆ ಓಡಿಹೋಗಲು ಪ್ರಯತ್ನಿಸಿದ್ದಾನೆ ಮತ್ತು ವಾಹನವನ್ನು ಗಡಿಬಿಡಿಯಲ್ಲಿ ರಿವರ್ಸ್‌ ತೆಗೆಯುವಾಗ ಗಾಯಕನಿಗೆ ಡಿಕ್ಕಿ ಹೊಡೆದ್ದಾನೆ. ಘಟನೆಯಲ್ಲಿ ಅಕಾ ತಲೆ, ತೋಳುಗಳು ಮತ್ತು ಕಾಲುಗಳ ಮೇಲೆ ಹಲವಾರು ಗಾಯಗಳಾಗಿದ್ದು, ಅವರ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದರು.
ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ವಿಕ್ಕಿಯನ್ನು  ನಂತರ ಮೊಹಾಲಿ ಪೊಲೀಸರು ಬಂಧಿಸಿದ್ದಾರೆ. ನಂತರ ಪೊಲೀಸರು ಸೋಹ್ನಾ ಪೊಲೀಸ್ ಠಾಣೆಯಲ್ಲಿ ಅಪರಾಧಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಅಪ್‌ ಡೇಟ್‌ ನೀಡಿರುವ ಸಹ ಪಂಜಾಬಿ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್, ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ಗಾಯಕನ ಚಿತ್ರವನ್ನು ಹಂಚಿಕೊಂಡಿದ್ದಾರೆ, “ನನ್ನ ಸಹೋದರ ಅಲ್ಫಾಜ್ ಮೇಲೆ ದಾಳಿ ನಡೆದಿದೆ. ಅಲ್ಫಾಜ್ ಅನ್ನು ಹೊಡೆದ ಅಪರಾಧಿಗಳನ್ನು ಹಿಡಿದ ಮೊಹಾಲಿ ಪೊಲೀಸರಿಗೆ ವಿಶೇಷ ಧನ್ಯವಾದಗಳು. ಅವನ ಆರೋಗ್ಯ ಗಂಭೀ ಸ್ಥಿತಿಯಲ್ಲಿದ್ದು, ಎಲ್ಲರೂ ದಯವಿಟ್ಟು ಅವನಿಗಾಗಿ ಪ್ರಾರ್ಥಿಸಿ ಎಂದು ಬರೆದಿದ್ದಾರೆ.
ಪಂಜಾಬಿ ಗಾಯಕ ಅಲ್ಫಾಜ್ ಅವರು ತಮ್ಮ ಸೂಪರ್ ಹಿಟ್ ಹಾಡುಗಳಾದ `ಪುಟ್ ಜಟ್ ದ, ರಿಕ್ಷಾ, ಗಡ್ಡಿ ಮತ್ತು ಇನ್ನೂ ಅನೇಕ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಗಾಯಕ ಯೋ ಯೋ ಹನಿ ಸಿಂಗ್ ಅವರೊಂದಿಗೆ `ಹೇ ಮೇರಾ ದಿಲ್`, `ಬೆಬೋ`, `ಬರ್ತ್‌ಡೇ ಬ್ಯಾಷ್` ಮತ್ತು `ಯಾರ್ ಬತೇರೆ` ನಂತಹ ಬ್ಲಾಕ್‌ ಬಸ್ಟರ್ ಹಿಟ್‌ ಗೀತೆಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!