Tuesday, June 28, 2022

Latest Posts

ಕನ್ನಡದಲ್ಲಿ ಟ್ವೀಟ್ ಮಾಡಿ ‘ಬ್ರಹ್ಮಾಸ್ತ್ರ’ದ ರಿಲೀಸ್ ಡೇಟ್ ಘೋಷಿಸಿದ ನಟಿ ಆಲಿಯಾ ಭಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ನಟನೆಯ ಬಿಗ್‌ ಬಜೆಟ್‌ ಸಿನಿಮಾ ಬ್ರಹ್ಮಾಸ್ತ್ರ ಸಿನಿಮಾದ ರಿಲೀಸ್‌ ಡೇಟ್‌ ಈಗ ಘೋಷಣೆಯಾಗಿದೆ.
ಈಗಾಗಲೇ ಮೋಷನ್‌ ಪೋಸ್ಟರ್‌ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ ಚಿತ್ರದ ಬಗ್ಗೆ ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ.
ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ ಎಂದು ಆಲಿಯಾ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲ ಕನ್ನಡಿಗರ ಮನಗೆದ್ದಿದ್ದಾರೆ.

ಚಿತ್ರದ ನಾಯಕಿಯಾಗಿ ಆಲಿಯಾ ಭಟ್‌ ಕಾಣಿಸಿಕೊಳ್ಳಲಿದ್ದು, ಜತೆಗೆ ಅಮಿತಾಭ್​ ಬಚ್ಚನ್​, ನಾಗಾರ್ಜುನ, ಮೌನಿ ರಾಯ್​ ಮತ್ತು ಡಿಂಪಲ್​ ಕಪಾಡಿಯ ಸೇರಿದಂತೆ ಹಲವು ಕಲಾವಿದರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಯಾನ್​ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ  ತೆರೆಕಾಣಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss