ವಂಡರ್‌ ವುಮನ್‌ ಜೊತೆ ಹಾಲಿವುಡ್‌ ನಲ್ಲಿ ಆಕ್ಷನ್‌ ಮಾಡಲಿದ್ದಾರೆ ಆಲಿಯಾಭಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ಟುಡೆಂಟ್‌ ಆಫ್‌ ದಿ ಇಯರ್‌ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದ ಆಲಿಯಾ ಭಟ್‌ ಈಗ ಹಾಲಿವುಡ್‌ ಗೂ ಕಾಲಿಡುತ್ತಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸೆಲ್ಫೀಯೊಂದನ್ನು ಪೋಸ್ಟ್‌ ಮಾಡಿರುವ ಆಲಿಯಾ “ನಾನೀಗ ನನ್ನ ಮೊದಲ ಹಾಲಿವುಡ್‌ ಚಿತ್ರೀಕರಣಕ್ಕೆ ಹೋಗುತ್ತಿದ್ದೇನೆ. ಮತ್ತೆ ಹೊಸಬಳಂತೆ ಅನ್ನಿಸುತ್ತಿದೆ. ನಾನು ತುಂಬಾ ನರ್ವಸ್‌ ಆಗಿದ್ದೇನೆ. ವಿಶ್‌ ಮೀ ಲಕ್”‌ ಎಂದು ಬರೆದು ಕೊಂಡಿದ್ದಾರೆ.

ಮೂಲಗಳ ವರದಿಯ ಪ್ರಕಾರ ಅವರು ಹಾರ್ಟ್ ಆಫ್ ಸ್ಟೋನ್ ಚಿತ್ರದ ಮೂಲಕ ಹಾಲಿವುಡ್‌ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಲ್ಲಿ ಅವರು ವಂಡರ್‌ ವುಮೆನ್‌ ಖ್ಯಾತಿಯ ಇಸ್ರೇಲಿ ಬೆಡಗಿ ಗಲ್‌ ಗಡೋಟ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳನ್ನು ನಿರ್ವಹಿಸಲಿದ್ದಾರೆ ಎಂದು ಬಿ-ಟೌನ್‌ ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ರಣಬೀರ್‌ ಕಫೂರ್‌ ಜೊತೆ ವಿವಾಹವಾಗಿರುವ ಆಲಿಯಾ ಭಟ್‌ ಅವರ ಗಂಗೂ ಬಾಯಿ ಕಥೇವಾಡಿ ಚಿತ್ರದಲ್ಲಿನ ನಟನೆಯನ್ನು ಹಲವರು ಮೆಚ್ಚಿಕೊಂಡಿದ್ದರು. ಅದರ ನಂತರ ರಣಬೀರ್‌- ಆಲಿಯಾ ಜೋಡಿ ಅಭಿನಯದ ಮೊದಲ ಚಿತ್ರ ʼಬ್ರಹ್ಮಾಸ್ತ್ರʼ ಇದೇ ಸೆಪ್ಟೆಂಬರ್‌ ನಲ್ಲಿ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಚಿತ್ರದ ಟ್ರೇಲರ್‌ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ದೊರಕಿದ್ದು ಆಲಿಯಾ ಅಭಿಮಾನಿಗಳು ʼಬ್ರಹ್ಮಾಸ್ತ್ರʼಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇವೆಲ್ಲದರ ನಡುವೆಯೇ ಹಾಲಿವುಡ್‌ ಗೆ ಆಲಿಯಾ ಕಾಲಿಡುತ್ತಿರುವುದನ್ನು ಕೇಳಿ ಅಭಿಮಾನಿಗಳು ಸಂತಸದಲ್ಲಿ ಮಿಂದೆದ್ದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!