Wednesday, August 17, 2022

Latest Posts

ನಟ ಚಿರು, ಸಂಚಾರಿ ವಿಜಯ್, ಪುನೀತ್ ಎಲ್ಲರೂ ಹುಟ್ಟಿದ್ದು ಒಂದೇ ತಾರೀಖು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಒಂದೂವರೆ ವರ್ಷದಲ್ಲಿ ಪ್ರತಿಭಾವಂತ, ಯುವ ನಟರನ್ನು ಸ್ಯಾಂಡಲ್ ವುಡ್ ಕಳೆದುಕೊಂಡಿದೆ.
ಮೊದಲಿಗೆ ಕೋವಿಡ್ ಸಮಯದಲ್ಲಿ ಅಗಲಿದ ನಟ ಚಿರಂಜೀವಿ ಸರ್ಜಾ, ನಂತರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ಈಗ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ.
ಚಿರಂಜೀವಿ ಸರ್ಜಾ ಸಾವಿನ ದುಃಖ ಮಾಸುವ ಮುನ್ನವೇ ಪ್ರತಿಭಾವಂತ ನಟ ಸಂಚಾರಿ ವಿಜಯ್ ರ ಸಾವು ಇಡೀ ಚಿತ್ರರಂಗವನ್ನೇ ದಿಗ್ಭ್ರಮೆಯಲ್ಲಿ ಮುಳುಗಿಸಿತ್ತು. ಇದರ ನಡುವೆ ಈಗ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ ನೀಡುವ ಸುದ್ದಿ ಅಂದರೆ ಅದು ನಟ ಪುನೀತ್ ರಾಜ್ ಕುಮಾರ್ ಸಾವು.
ಅಷ್ಟೇ ಅಲ್ಲಾ… ಇನ್ನೊಂದು ವಿಚಾರವೆಂದರೆ ಈ ಮೂವರು ಅದ್ಭುತ ನಟರ ಹುಟ್ಟುಹಬ್ಬವೂ ಒಂದೇ ತಾರೀಖು.
ಅಂದರೆ ನಟ ಚಿರು ಹುಟ್ಟಿದ್ದು, ಅ.17 1984ರಲ್ಲಿ. ಸಂಚಾರಿ ವಿಜಯ್ ಹುಟ್ಟಿದ್ದು, ಜು.17 1983ರಲ್ಲಿ ಹಾಗೂ ನಟ ಪುನೀತ್ ಹುಟ್ಟಿದ್ದು ಕೂಡ ಮಾ.17 1975ರಂದು. ಈ 17ನೇ ಸಂಖ್ಯೆ ಸ್ಯಾಂಡಲ್ ವುಡ್ ಗೆ ಶಾಪವೋ ಅಥವಾ ಇವೆಲ್ಲವೂ ಕಾಕತಾಳಿಯವೋ ಎನ್ನುವ ಬೇಸರದ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!