ಇಂದಿನಿಂದ ಪುರಿ ಜಗನ್ನಾಥ ದೇವಾಲಯದ ಎಲ್ಲಾ 4 ದ್ವಾರಗಳು ಓಪನ್..!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೂನ್ 13, ಗುರುವಾರದಂದು ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ. ಒಡಿಶಾದಲ್ಲಿ ಹೊಸದಾಗಿ ರಚನೆಯಾದ ಭಾರತೀಯ ಜನತಾ ಪಕ್ಷದ ಸರ್ಕಾರವು ಪೂಜ್ಯ ದೇಗುಲದ ಎಲ್ಲಾ ದ್ವಾರಗಳನ್ನು ತೆರೆಯುವುದಾಗಿ ಘೋಷಿಸಿತ್ತು.

ಮಾಂಝಿ ಅವರು ಬುಧವಾರದ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮುಚ್ಚಲ್ಪಟ್ಟಿರುವ ಪವಿತ್ರ ದೇಗುಲದ ಎಲ್ಲಾ ದ್ವಾರಗಳನ್ನು ಭಕ್ತರಿಗಾಗಿ ಮತ್ತೆ ತೆರೆಯುವ ಪ್ರಸ್ತಾಪವನ್ನು ಅನುಮೋದಿಸಿದರು.

12ನೇ ಶತಮಾನದ ದೇಗುಲದ ಪಾಲನೆ ಮತ್ತು ಅಭಿವೃದ್ಧಿಗಾಗಿ ₹500 ಕೋಟಿ ಮೌಲ್ಯದ ಕಾರ್ಪಸ್ ನಿಧಿಯನ್ನು ಸ್ಥಾಪಿಸುವುದಾಗಿ ಕ್ಯಾಬಿನೆಟ್ ಘೋಷಿಸಿತು.

“ಚುನಾವಣೆ ಸಮಯದಲ್ಲಿ, ನಾವು ಎಲ್ಲಾ 4 ಗೇಟ್‌ಗಳನ್ನು ಮತ್ತೆ ತೆರೆಯುತ್ತೇವೆ ಎಂದು ಹೇಳಿದ್ದೆವು … ಇಂದು ದೇವಾಲಯದ ಎಲ್ಲಾ ನಾಲ್ಕು ದ್ವಾರಗಳು ತೆರೆಯಲಿವೆ. ಪರಿಷತ್ತಿನ ಎಲ್ಲಾ ಸದಸ್ಯರು ಇಲ್ಲಿ ಇದ್ದಾರೆ. ಸಿಎಂ ಕೂಡ ಇದ್ದಾರೆ … ಅಭಿವೃದ್ಧಿ ಯೋಜನೆಗಳಿಗೆ 500 ಕೋಟಿ ರೂಪಾಯಿ ಮೌಲ್ಯದ ಕಾರ್ಪಸ್ ನಿಧಿಯನ್ನು ಘೋಷಿಸಲಾಗಿದೆ… ನಾವು ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದೇವೆ ಮತ್ತು ಇಂದು ನಾವು ಗೇಟ್‌ಗಳನ್ನು ತೆರೆಯುತ್ತಿದ್ದೇವೆ” ಎಂದು ಒಡಿಶಾ ಸಚಿವ ಸೂರ್ಯಬಂಶಿ ಸೂರಜ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!