spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪುರಿ ಹೆರಿಟೇಜ್ ಕಾರಿಡಾರ್: ಜಗನ್ನಾಥನ ನೆಲವೂ ತಾಳಲಿದೆ ಹೊಸರೂಪ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ, ಕಾಶಿ ಇಂಥ ಧಾರ್ಮಿಕ ಆಸ್ಥೆಯ ಸ್ಥಳಗಳು ಇತ್ತೀಚಿನ ವರ್ಷಗಳಲ್ಲಿ ನವರೂಪವನ್ನು ಪಡೆಯುವಂತೆ ಅಭಿವೃದ್ಧಿಯಾಗುತ್ತಿರುವುದನ್ನು ನೀವು ಗಮನಿಸಿದ್ದಿರಬಹುದು. ಒಡಿಶಾ ಸರ್ಕಾರದ ಆಸಕ್ತಿಯಿಂದ ಇದೀಗ ಜಗನ್ನಾಥನ ಸನ್ನಿಧಿ ಪುರಿಯೂ ಸಹ ದೊಡ್ಡ ಬದಲಾವಣೆಗೆ ತೆರೆದುಕೊಂಡಿದೆ. ಹೆರಿಟೇಜ್ ಕಾರಿಡಾರ್ ಒಂದನ್ನು ನಿರ್ಮಿಸುವ ನಿಟ್ಟಿನಲ್ಲಿ ₹ 331.26 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಏಳು ಪಥಗಳ ಅಗಲ ಮಾರ್ಗ

ಮಹತ್ವಾಕಾಂಕ್ಷೆಯ ಹೆರಿಟೇಜ್ ಕಾರಿಡಾರ್ ಯೋಜನೆಯನ್ನು ಡಿಸೆಂಬರ್ 2019ರಲ್ಲಿ ಅನಾವರಣಗೊಳಿಸಲಾಗಿದೆ. ರಥೋತ್ಸವ ಹಾಗೂ ಉತ್ಸವಗಳಂತಹ ವಿಶೇಷ ಸಂದರ್ಭಗಳಲ್ಲಿ ಭಕ್ತಾದಿಗಳಿಗೆ ದೇವರ ಸುಗಮ ದರ್ಶನಕ್ಕಾಗಿ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಮತ್ತು ಸೌಕರ್ಯಗಳನ್ನು ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ’ಶ್ರೀಮಂದಿರ ಪರಿಕ್ರಮ’ ಯೋಜನೆಯಲ್ಲಿ ಭಕ್ತರಿಗಾಗಿ ಏಳು ಪಥಗಳ ಅಗಲದ ಮಾರ್ಗ ಮತ್ತು ‘ಮೇಘನಾದ ಪಚೇರಿ’ (ದೇವಾಲಯದ ಗಡಿ ಗೋಡೆ) ಸುತ್ತಲೂ ದೇವತೆಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಿಸಲಾಗುತ್ತದೆ.

ಭಕ್ತರ ಸೌಕರ್ಯಕ್ಕಾಗಿ ವಿಶಾಲ ಸ್ವಾಗತ ಮಂದಿರ

ಯೋಜನೆಯಲ್ಲಿ 6000 ಭಕ್ತರು ಕುಳಿತುಕೊಳ್ಳಲು ಸ್ವಾಗತ ಮಂದಿರ, ದೇವಾಲಯದ ಸುತ್ತಲೂ ಹಸಿರು ಕಾರಿಡಾರ್, ಭಕ್ತರಿಗೆ ಪ್ರತ್ಯೇಕ ಶೌಚಾಲಯ ಸಂಕೀರ್ಣಗಳೊಂದಿಗೆ ಬಟ್ಟೆ ಬದಲಾಯಿಸುವ ಕೊಠಡಿಗಳು, ಎಟಿಎಂ ಕೌಂಟರ್‌ಗಳು, ಆರೋಗ್ಯ ಕೇಂದ್ರ ಹಾಗೂ ಯಾತ್ರಿಕರ ಮಾಹಿತಿ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಟಾಟಾ ಸಮೂಹದ ಕಂಪನಿಯು ₹ 331.26 ಕೋಟಿಗಳ ಕಾಮಗಾರಿಗಳನ್ನು 18 ತಿಂಗಳೊಳಗೆ ಕಾರ್ಯಗತಗೊಳಿಸಲಿದೆ. ಯೋಜನೆಯ ಭಾಗವಾಗಿ 12ನೇ ಶತಮಾನದ ದೇಗುಲದ 75 ಮೀಟರ್ ಸುತ್ತಳತೆಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ನೂತನ ಕಳಿಂಗ ಶೈಲಿಯ ವಾಸ್ತುಶಿಲ್ಪ

ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಾದ ಲಾಂಗುಲಿ ಮಠ, ಬಡಛಟ ಮಠ ಮತ್ತು ಚೌನಿ ಮಠಗಳನ್ನು ನೂತನ ಕಳಿಂಗ ಶೈಲಿಯ ವಾಸ್ತುಶಿಲ್ಪದಲ್ಲಿ ನವೀಕರಿಸಲಾಗುತ್ತದೆ. ಶ್ರೀಜಗನ್ನಾಥ ದೇವಸ್ಥಾನದ ಆಡಳಿತ (ಎಸ್‌ಜೆಟಿಎ) ಕಟ್ಟಡವನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ. ಜೊತೆಗೆ ಆಜ್ಞಾ (ಕಮಾಂಡ್) ಮತ್ತು ನಿಯಂತ್ರಣ (ಕಂಟ್ರೋಲ್) ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಯೋಜನೆಯು ಬಡಾದಂಡ ಹೆರಿಟೇಜ್ ಸ್ಟ್ರೀಟ್‌ಸ್ಕೇಪ್, ಶ್ರೀಸೇತು, ಜಗನ್ನಾಥ ಬಲ್ಲವ್ ಯಾತ್ರಾ ಸೆಂಟರ್ ಮತ್ತು ಬಹುಮಹಡಿ ವಾಹನ ಪಾರ್ಕಿಂಗ್ ಅಭಿವೃದ್ಧಿಯನ್ನೂ ಒಳಗೊಂಡಿದೆ.

ಈ ಹೆರಿಟೇಜ್ ಕಾರಿಡಾರ್ ಯೋಜನೆಗೆ ಪುರಿಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಮ್ಮುಖದಲ್ಲಿ ‘ಗಜಪತಿ ಮಹಾರಾಜ’ ದಿವ್ಯಸಿಂಗ್ ದೇಬ್ ಅವರು ಬುಧವಾರ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಒಡಿಶಾ ವಿಧಾನಸಭಾ ಸ್ಪೀಕರ್ ಎಸ್.ಎನ್. ಪಾತ್ರೊ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್, ಪುರಿ ಸಂಸದ ಪಿನಾಕಿ ಮಿಶ್ರಾ ಮತ್ತು ರಾಜ್ಯದ ಸಚಿವರು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss