Wednesday, August 10, 2022

Latest Posts

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಗಾಯಗೊಂಡ ಸೈನಾ ನೆಹ್ವಾಲ್ ನಿರ್ಗಮನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೆ ಗಾಯಗೊಂಡು ನಿರ್ಗಮಿಸಿದರು.
2015ರಲ್ಲಿ ಇದೇ ಟೂರ್ನಿಯಲ್ಲಿ ರನ್ನರ್‍ಸ್ ಅಪ್ ಆಗಿದ್ದ ಸೈನಾ ಈ ಬಾರಿ ತಮ್ಮ ಮೊದಲ ಪಂದ್ಯದಲ್ಲಿ ಡೆನ್ಮಾರ್ಕಿನ ಮಿಯಾ ಬ್ಲಿಚ್‌ಪೀಲ್ಡ್ ವಿರುದ್ಧ ಆಡುತ್ತಿರುವಾಗ ತೊಡೆ ನೋವಿಗೆ ಒಳಗಾದರು. ಮೊದಲ ಸೆಟ್ 8-21ರಿಂದ ಸೋತಿದ್ದ ಸೈನಾ ಎರಡನೇ ಸೆಟ್‌ನಲ್ಲೂ 4-10ರಿಂದ ಹಿಂದಿದ್ದಾಗ ಪಂದ್ಯವನ್ನು ಕೈಬಿಟ್ಟು ನಿರ್ಗಮಿಸಿದರು.
ಕೆ. ಶ್ರೀಕಾಂತ್ ಕೂಡ ಶ್ರೇಯಾಂಕರಹಿತ ಆಟಗಾರನ ವಿರುದ್ಧ ಸೋಲು ಕಂಡರು. ಅವರು ಐರ್ಲೆಂಡಿನ ಗುಯೇನ್ ನಾಟ್ ವಿರುದ್ಧ ಪರಾಭವಗೊಂಡರು. ಕಾಶ್ಯಪ್‌ಗೆ ಕೂಡ ಜಪಾನಿನ ಕೆಂಟೋ ಮೊಮೊಟಾ ವಿರುದ್ಧ ಸೋಲಾಯಿತು.
ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಂದಾಗಿರುವ ಭಾರತದ ಪಿ.ವಿ. ಸಿಂಧು ಮೊದಲ ಸುತ್ತನ್ನು ನಿರಾಯಾಸವಾಗಿ ದಾಟಿ ಮುಂದಿನ ಸುತ್ತು ಪ್ರವೇಶಿಸಿದರು. ಅವರು ಮಲೇಶಿಯಾದ ಸೋನಿಯಾ ಚೀಹ್ ವಿರುದ್ಧ ನೇರಸೆಟ್‌ಗಳ ಗೆಲುವು ಸಾಧಿಸಿದರು.
ಸಾಯಿ ಪ್ರಣೀತ್ ಫ್ರಾನ್ಸ್‌ನ ಟೋಮಾ ಜೂನಿಯರ್ ಅವರನ್ನು ಸೋಲಿಸಿ ಮುಂದಿನ ಸುತ್ತೀಗೇರಿದರೆ, ಪ್ರಣೋಯ್ ಮಲೇಶಿಯಾದ ಡಾರೆನ್ ಲೀವ್ ರನ್ನು ಪರಾಭವಗೊಳಿಸಿದರು.
ಸಮೀರ್ ವರ್ಮಾ ಅವರಿಗೂ ಮೊದಲ ಸುತ್ತಿನಲ್ಲಿ ಗೆಲುವು ಒಲಿಯಿತು. ಅವರು ಬ್ರೆಜಿಲ್‌ನ ಆಟಗಾರನ್ನು ಸೋಲಿಸಿದರು.
ಪ್ರಣೋಯ್ ಮತ್ತು ಪ್ರಣೀತ್ ಎರಡನೇ ಸುತ್ತಿನಲ್ಲಿ ಕಠಿಣ ಎದುರಾಳಿಗಳನ್ನು ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss