Sunday, March 7, 2021

Latest Posts

ಹಿಂದುತ್ವ, ಹಿಂದ, ಅಹಿಂದ ಎಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ದೊಂಬರಾಟ: ಹೆಚ್.ಡಿ.ಕುಮಾರಸ್ವಾಮಿ

 ಹೊಸದಿಗಂತ ವರದಿ, ಮೈಸೂರು:

ಹಿಂದುತ್ವ, ಹಿಂದ, ಅಹಿಂದ ಎಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೊಂಬರಾಟ. ಇವೆಲ್ಲ ಅಧಿಕಾರ ಪಡೆಯಲಿಕ್ಕಷ್ಟೆ, ಜನಪರ ಕಾಳಜಿ ಇಲ್ಲ ಎಂದು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗಲೇ ಸಿಎಂ ಆಗಿದ್ದೀನಿ ಎಂಬ ಕನಸು ಕಾಣುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿಂದೆ ಇದ್ದ ಸಂಸ್ಕೃತಿಯೇ ಬೇರೆ. ಸಿದ್ದರಾಮಯ್ಯ ಹೋದ ಮೇಲೆ ಇರುವ ಸಂಸ್ಕೃತಿಯೇ ಬೇರೆ. ಅವರ ನಡವಳಿಕೆಗಳು, ಅಗೌರವದ ಮಾತುಗಳು ಎಲ್ಲವನ್ನೂ ನೋಡುತ್ತೀದ್ದೀನಿ ಎಂದರು.
ಚಿಕ್ಕಬಳ್ಳಾಪುರದಲ್ಲಿ ಜಿಲಿಟಿನ್ ಸ್ಪೋಟವಾಗಿ 6 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಅಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿರುವರ ವೈಫಲ್ಯವೇ ಕಾರಣ. ನಾನು ಸಾಕಷ್ಟು ಮಾಹಿತಿಯನ್ನ ಇಟ್ಟುಕೊಂಡಿದ್ದೇನೆ. ಸಮಯ ಬಂದಾಗ ಅದೆಲ್ಲವನ್ನು ಹೇಳುತ್ತೀನಿ ಎಂದರು. ಸರ್ಕಾರ ಹೇಗೆ ನಡೆಯುತ್ತೆ ಹಾಗೆ ಅಧಿಕಾರಿಗಳು ಸಹ ಹಾಗೆ ನಡೆದುಕೊಳ್ತಾರೆ. ಅಕ್ರಮ ಇರೋದು ಸಕ್ರಮ ಮಾಡುತ್ತೀವಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.
ಗಣಿಗಾರಿಕೆಯಲ್ಲಿ ಸಣ್ಣ ಪುಟ್ಟದ ಗಾಯಗೊಂಡ ಘಟನೆ ಬೆಳಕಿಗೆ ಬರೋದಿಲ್ಲ. ಗಣಿಗಾರಿಕೆ ಮಾಲೀಕರು, ಪೊಲೀಸರು ಅಲ್ಲೆ ಅದನ್ನ ಬಿಟ್ಟು ಬಿಡುತ್ತಾರೆ. ದೊಡ್ಡ ಮಟ್ಟದಲ್ಲಿ ಆದಾಗ ಹೇಳಿಕೆ ಕೊಡುತ್ತಾರೆ, ನಂತರ ಮತ್ತೆ ಗಣಿಗಾರಿಕೆ ಮುಂದುವರೆಸುತ್ತಾರೆ.
ಇದರಲ್ಲಿ ಜನಪ್ರತಿನಿಧಿಗಳ ಪಾತ್ರವೇ ಹೆಚ್ಚಾಗಿದೆ. ಇದರಲ್ಲಿ ಆ ಪಕ್ಷ ಈ ಪಕ್ಷ ಅಂತ ಏನಿಲ್ಲ. ಜಿಲಿಟಿನ್ ಸ್ಪೋಟ ವಿಚಾರದಲ್ಲಿ ಇದು ಎರಡನೇ ದೊಡ್ಡ ಪ್ರಕರಣ. ಜಿಲಿಟಿನ್‌ನಲ್ಲಿ ಪೌಡರ್ ಹಾಕುವಂತದ್ದರಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ನಡೆಯುತ್ತಿರುವ ಅಕ್ರಮ ಸರಿಯಾಗಬೇಕಾದರೆ. ಸರಿಯಾದ ನಿರ್ಣಯ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರು, ಸಚಿವರು, ಒತ್ತಡ ಹಾಕಿ ಈ ಸಮಸ್ಯೆ ಆಗುತ್ತಿದೆ. ಹಣಕ್ಕಾಗಿ ಎಲ್ಲವನ್ನು ಮಾಡುವುದಲ್ಲ. ಮೊದಲ ಬಡವರ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಈ ಘಟನೆಗಳನ್ನ ನೋಡುತ್ತಿದ್ದರೆ ಇನ್ನು ಎಷ್ಟು ಜೀವಗಳಿಗೆ ಸಮಸ್ಯೆ ಆಗತ್ತೋ? ಏನೋ ಎಂದು ಕಳವಳ ವ್ಯಕ್ತಪಡಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss