spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಖಿಲ ಭಾರತ ನಾಗರಿಕ ಸೇವಾ ಕಬಡ್ಡಿ ಸ್ಪರ್ಧೆ: ರಾಜ್ಯದಿಂದ ಎಸ್. ಕೆ. ಕುಮಾರಸ್ವಾಮಿ ಆಯ್ಕೆ

- Advertisement -Nitte

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಹರಿಯಾಣ ರಾಜ್ಯದ ಬಿವಾನಿಯಲ್ಲಿ ಸೆಪ್ಟಂಬರ್ 18 ರಿಂದ ಸೆ.20 ವರೆಗೆ ನಡೆಯಲಿರುವ ಅಖಿಲ ಭಾರತ ನಾಗರೀಕ ಸೇವಾ ಕಬಡ್ಡಿ ಸ್ಪರ್ಧೆಯಲ್ಲಿ ನಗರದ ಯುವಕ ಎಸ್.ಕೆ.ಕುಮಾರಸ್ವಾಮಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಈ ವಿಚಾರ ತಿಳಿಸಿದ್ದು, ಅಪ್ಪಟ ಗ್ರಾಮೀಣ ಕ್ರೀಡಾ ಪ್ರತಿಭೆಯಾಗಿರುವ ಕುಮಾರಸ್ವಾಮಿ ಅವರು ನಗರದ ಜಯನಗರ ಬಡಾವಣೆಯ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ಗ್ರಾಮೀಣ, ಜಿಲ್ಲಾ ಹಂತದ ದಸರಾ ಕ್ರೀಡಾಕೂಟ ಕಬ್ಬಡಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss