Monday, March 27, 2023

Latest Posts

ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಜ.31 ರಂದು ಸರ್ವಪಕ್ಷಗಳ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜ.31 ರಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಸರ್ವಪಕ್ಷ ಸಭೆ ನಡೆಸಲಿದ್ದಾರೆ.
ಮೇಲ್ಮನೆಯ ಕಲಾಪ ಸುಗಮವಾಗಿ ನಡೆಯುವ ಸಲುವಾಗಿ ವರ್ಚ್ಯುಯಲ್ ಸಭೆ ನಡೆಯಲಿದೆ. ಪೆಗಾಸಸ್, ಹೆಚ್ಚುತ್ತಿರುವ ನಿರುದ್ಯೋಗ, ತೈಲ ಬೆಲೆ ಏರಿಕೆ, ಕೊರೋನಾ ಸೋಂಕು, ಅಮರ್ ಜವಾನ್ ಜ್ಯೋತಿ ಸ್ಥಳಾಂತರ ಮುಂತಾದ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆ ಅಧಿವೇಶನ ಸುಗಮವಾಗಿ ಸಾಗುವಂತೆ ಮಾಡಲು ಈ ಸಭೆ ನಡೆಸಲಾಗುವುದು. ಬಜೆಟ್ ಅಧಿವೇಶನದ ಮೊದಲಾರ್ಧ ಜ.31 ರಿಂದ ಫೆ.11 ರವರೆಗೆ ನಡೆಯಲಿದೆ. ಮಾರ್ಚ್ 14 ರಂದು ಮತ್ತೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಏ.೮ರವರೆಗೆ ನಡೆಯಲಿದೆ. ಫೆ.1 ರಂದು ಸರ್ಕಾರ 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!