spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಯಸಿದ್ದೆಲ್ಲವನ್ನೂ ಸಾಧಿಸಿದೆ, ಇನ್ನು ಅತಿಥಿ ಹೆಚ್ಚು ದಿನ ಇರಬಾರದು: ಕೋಚ್​ ಹುದ್ದೆಯಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿದ ರವಿಶಾಸ್ತ್ರಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೀಂ ಇಂಡಿಯಾ ಕ್ರಿಕೆಟ್​ನ ಮುಖ್ಯ ಕೋಚ್​​ ರವಿಶಾಸ್ತ್ರಿ ಟಿ – 20 ವಿಶ್ವಕಪ್​ ಬಳಿಕ ಆ ಸ್ಥಾನದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ಅವರು, ಬಯಸಿದ್ದೆಲ್ಲವನ್ನೂ ಸಾಧಿಸಿದೆ. ಇನ್ನು ಅತಿಥಿ ಹೆಚ್ಚು ದಿನ ಇರಬಾರದು ಎಂದು ಹೇಳಿಕೊಳ್ಳುವ ಮೂಲಕ ಕೋಚ್​​ ಸ್ಥಾನ ತೊರೆಯುವ ಸುಳಿವು ನೀಡಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಕೋಚ್​ ಆಗಿದ್ದ ಅನಿಲ್ ಕುಂಬ್ಳೆ ಆ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ 2017ರಲ್ಲಿ ಕೋಚ್​ ಸ್ಥಾನಕ್ಕೆ ಆಯ್ಕೆಯಾಗಿದ್ದ ರವಿಶಾಸ್ತ್ರಿ, 2019ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾಗಿದ್ದರು. ಟಿ – 20 ವಿಶ್ವಕಪ್​ ಮುಕ್ತಾಯದೊಂದಿಗೆ ಅವರ ಅವಧಿ ಪೂರ್ಣಗೊಳ್ಳಲಿದ್ದು, ಹೀಗಾಗಿ ಆ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ಲಂಡನ್​ ಪ್ರವಾಸದ ವೇಳೆ ಕೋವಿಡ್ ಸೋಂಕಿಗೊಳಗಾಗಿರುವ ರವಿಶಾಸ್ತ್ರಿ 10 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗಿದ್ದು, ಈ ವೇಳೆ ‘ದಿ ಗಾರ್ಡಿಯನ್’ ಜೊತೆ ಮಾತನಾಡಿದ್ದಾರೆ.
ಟಿ-20 ವಿಶ್ವಕಪ್​ ತಂಡಕ್ಕೆ ವಿಶೇಷವಾಗಿದೆ. ಆದರೆ, ನಾನು ಕೋಚ್​ ಆಗಿದ್ದ ಸಂದರ್ಭದಲ್ಲಿ ತಂಡ ಅನೇಕ ವಿಶೇಷ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ನಾನು ಬಯಸಿದ್ದೆಲ್ಲವನ್ನೂ ಸಾಧಿಸಿದ್ದೇನೆ ಎಂದು ಕೊಂಡಿದ್ದೇನೆ. ಐದು ವರ್ಷಗಳ ಕಾಲ ಟೆಸ್ಟ್​ನಲ್ಲಿ ನಂಬರ್​ 1 ಸ್ಥಾನ, ಆಸ್ಟ್ರೇಲಿಯಾ ವಿರುದ್ಧ ಎರಡು ಸಲ ಹಾಗೂ ಇಂಗ್ಲೆಂಡ್​ ವಿರುದ್ಧ ಮಹತ್ವದ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಶಾಸ್ತ್ರಿ ಟೀಂ ಇಂಡಿಯಾ ಕೋಚ್​ ಆಗಿದ್ದ ಸಂದರ್ಭದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟಿ -20 ಸರಣಿ ಗೆದ್ದಿದ್ದು, ಅನೇಕ ದೇಶಗಳ ವಿರುದ್ಧ ಟೆಸ್ಟ್​​ ಸರಣಿಯಲ್ಲೂ ಜಯ ಸಾಧಿಸಿದೆ.
ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ್​ ಮೈಕೇಲ್​ ಅಥರ್ಟನ್ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದ್ದೆ. ಕಾಂಗರೂ ನಾಡಲ್ಲಿ ಆಸ್ಟ್ರೇಲಿಯಾ ಸೋಲಿಸುವುದು ಹಾಗೂ ಇಂಗ್ಲೆಂಡ್​ ನೆಲದಲ್ಲಿ ಗೆಲುವು ಸಾಧಿಸುವುದು ನನ್ನ ಪ್ರಕಾರ ಅತಿದೊಡ್ಡ ಸಾಧನೆ. ಈಗಾಗಲೇ ನಾನು ಆ ಕೆಲಸ ಮಾಡಿದ್ದೇನೆ. ಸದ್ಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದ್ದೇವೆ ಎಂದಿದ್ದಾರೆ.​

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss