Saturday, August 13, 2022

Latest Posts

ಒಂದೇ ಸಮ ಬಿಕ್ಕಳಿಕೆ: ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ (66) ಅವರು ತುರ್ತಾಗಿ ಸರ್ಜರಿಗಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೈರ್ ಅವರಿಗೆ ಕಳೆದ 10 ದಿನಗಳಿಂದಲೂ ಒಂದೇ ಸಮ ಬಿಕ್ಕಳಿಕೆ ಬರುತ್ತಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಪಾಸಣೆಗಳನ್ನು ಮಾಡಲಾಗಿದ್ದು, ಈ ವೇಳೆ ಕರುಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ.
ಇನ್ನು ಟ್ವೀಟ್ ಮಾಡಿರುವ ಜೈರ್ ಬೋಲ್ಸೋನಾರೋ, ನಾನು ಆದಷ್ಟು ಶೀಘ್ರವೇ ಹಿಂತಿರುಗುತ್ತೇನೆ ಎಂಬ ನಂಬಿಕೆಯಿದೆ. ಎಲ್ಲವೂ ದೇವರ ಇಚ್ಛೆ ಎಂದರು.
2018ರಲ್ಲಿ ಚುನಾವಣಾ ಪ್ರಚಾರದ ವೇಳೆ ಜೈರ್ ಬೋಲ್ಸೋನಾರೋ ಚೂರಿ ಇರಿತಕ್ಕೆ ಒಳಗಾಗಿದ್ದರು. ಅದು ಕರುಳಿಗೂ ತಗುಲಿತ್ತು. ಅಂದಿನಿಂದಲೂ ಜೈರ್ ಆರೋಗ್ಯದ ಬಗ್ಗೆ ಸಹಜವಾಗಿಯೇ ಕಳವಳ ಇದೆ. ಅಂದು ಜೈರ್ ಬೋಲ್ಸೋನಾರೋ ತುಂಬ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಅವರ ದೇಹದ ಶೇ.40ರಷ್ಟು ರಕ್ತವನ್ನು ಕಳೆದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss