Wednesday, August 10, 2022

Latest Posts

4 ಕೋಟಿ ರೂ.ವೆಚ್ಚದಲ್ಲಿ‌ ನಿರ್ಮಿಸಿದ ಕೆರೆ ಕಾಮಗಾರಿ ವೀಕ್ಷಿಸಿದ ಎಂಎಲ್’ಸಿ ಅಲ್ಲಂ ವೀರಭದ್ರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಬಳ್ಳಾರಿ:

ಜಿಲ್ಲೆಯ ಮಿಂಚೇರಿ ಗ್ರಾಮ ಸೇರಿದಂತೆ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಕೆರೆಯನ್ನು ಎಮ್ಮೆಲ್ಸಿ ಅಲ್ಲಂ ವೀರಭದ್ರಪ್ಪ ಅವರು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ಮಿಂಚೇರಿ ಸೇರಿದಂತೆ ಸುತ್ತಲಿನ ಗ್ರಾಮಗಳ ನಾಗರಿಕರಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು 4 ಕೋಟಿ ರೂ.ವೆಚ್ಚದಲ್ಲಿ ಕೆರೆಯನ್ನು ನಿರ್ಮಿಸಲಾಗಿದೆ. ಇದರಿಂದ ವ್ಯಾಪ್ತಿಯ ನಾಗರಿಕರಿಗೆ ‌ನೀರಿನ‌ ಬವಣೆ ತಪ್ಪಲಿದೆ. ಕ್ಷೇತ್ರದ ಜನರಿಗೆ‌ ನೀಡಿದ ಭರವಸೆಯಂತೆ ‌ನಡೆದುಕೊಂಡಿರುವೆ, ಬರುವ ದಿನಗಳಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ. ಎಲ್ಲರಂತೆ ಭರವಸೆಗಳ ಮಹಾಪೂರವನ್ನೇ ಹರಿಸುವ ವ್ಯಕ್ತಿ ನಾನಲ್ಲ, ನಾನು ಹೆಚ್ಚು ಮಾತನಾಡೋಲ್ಲ, ನನ್ನ ಅಭಿವೃದ್ಧಿ ಕೆಲಸಗಳೇ ಮಾತಾಡಲಿವೆ ಎಂದರು.
ಕೆಕೆಆರ್ ಡಿಬಿ ಯೋಜನೆಯಡಿ ನಾಲ್ಕು ನೂರು ಲಕ್ಷ ರೂ.ಅನುದಾನ ಒದಗಿಸಿ ಕೆರೆಯನ್ನು ನಿರ್ಮಿಸಲಾಗಿದೆ, ಈ ಕಾಮಗಾರಿಯನ್ನು ವೀಕ್ಷಿಸಲು ಅಧಿಕಾರಿಗಳೊಂದಿಗೆ ಆಗಮಿಸಿರುವೆ. ತುಮಟಿ ಹತ್ತಿರದ ಕರಿ ಮಾರೆಮ್ಮ ದೇಗುಲ ಹತ್ತಿರ ಕುಡಿವ ನೀರನ್ನು ಸಂಗ್ರಹಿಸಲು ಚೆಕ್ ಡ್ಯಾಂ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಸ್ಥಳ ಪರಿಶೀಲನೆ ನಡೆಸಲಾಗಿದೆ, ತುಮಟಿ ರಸ್ತೆ ಪಕ್ಕದಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಪುರಾತನ ಕೆರೆಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚೆರ್ಚಿಸಲಾಗಿದೆ. ನನಗೆ ಅಧಿಕಾರ ಮುಖ್ಯವಲ್ಲ, ಕ್ಷೇತ್ರದ ಜನರ ಸೇವೆ ಮುಖ್ಯ , ಎಂದೂ ಅಧಿಕಾರಕ್ಕಾಗಿ ನಾನು ಲಾಭಿ‌ ಮಾಡಿದ ವ್ಯಕ್ತಿಯಲ್ಲ, ಜನರ ಸೇವೆಯೇ ನನ್ನ ಸೌಭಾಗ್ಯ, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ತಕ್ಕಂತೆ ಅವಧಿಯಲ್ಲಿ ಮಾದರಿ ರೀತಿಯ ಕೆಲಸಗಳನ್ನು ಮಾಡುವೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ, ಅರಣ್ಯ ಇಲಾಖೆ ಉಪ(ಪ್ರಾದೇಶಿಕ) ಸಂರಕ್ಷಣಾದಿಕಾರಿಗಳು, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅದಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ವಿವಿಧ ಗ್ರಾಮಗಳ ಮುಖಂಡರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss